ಟಾಪ್ ಸ್ಟೋರಿ

3 ನಿಗಮದಿಂದ 12 ಸಾವಿರ ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ: ಡಿಸಿಎಂ ಲಕ್ಷ್ಮಣ ಸವದಿ

ಶ್ರೀನಿವಾಸ ಪಟ್ಟಣ

ಬೆಳಗಾವಿ:ಇಂದು ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ವರೆಗೆ ರಾಜ್ಯದಾದ್ಯಂತ ಕರ್ಫ್ಯೂ ಮತ್ತು ಲಾಕ್ಡೌನ್ ಬಿಗಿಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ರಾಜ್ಯದ 3 ಸಾರಿಗೆ ನಿಗಮಗಳಿಂದ 12 ಸಾವಿರ ಹೆಚ್ಚುವರಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಇಂದು ರಾಜ್ಯದ 3 ನಿಗಮಗಳಿಂದ ಬಸ್ಸುಗಳು ಕಾರ್ಯಾಣರಣೆ ನಡೆಸಲಿದ್ದು, ಬೆಂಗಳೂರಿನಿಂದ ಹೊರಗಡೆ ಮತ್ತು ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ಮತ್ತು ಇತರ ಪ್ರದೇಶಗಳಿಗೆ ಸಂಚರಿಸಲಿವೆ ಎಂದು ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

ನಿಗದಿತ ಕರ್ಫ್ಯೂ ಸಮಯದ ಒಳಗೆ ಸಂಚರಿಸಲಿರುವ ಬಸ್ಸುಗಳ ಈ ವಿಶೇಷ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಸಾರಿಗೆ ಸಚಿವರು ವಿನಂತಿಸಿದ್ದಾರೆ.‌

ಇಂದು ರಾತ್ರಿಯ ಒಳಗೆ ತಮ್ಮ ಸ್ಥಳಕ್ಕೆ ತಲುಪಬೇಕಾದ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ, ನಿಗದಿತ ಕೋವಿಡ್ ಮಾರ್ಗಸೂಚಿ ಅನ್ವಯ, ಮುಂಜಾಗ್ರತೆ ವಹಿಸಿ ಈ ಸಾರಿಗೆ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!