ಟಾಪ್ ಸ್ಟೋರಿ
ಮಂಗಲ ಸುರೇಶ್ ಅಂಗಡಿಗೆ ಕೊರೊನಾ ಪಾಸಿಟಿವ್

ಮಂಗಲ ಸುರೇಶ್ ಅಂಗಡಿಗೆ ಕೊರೊನಾ ಪಾಸಿಟಿವ್..
ಬೆಳಗಾವಿ: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಂಗಲ ಅಂಗಡಿ ಅವರಿಗೆ ಕರೋನಾ ಪಾಸಿಟಿವ್ ಬಂದಿದ್ದು,ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿರುವ ಮಾಹಿತಿಯನ್ನು ಅವರು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ.
ಕೋವಿಡ್ ತಪಾಸಣೆಗೆ ಒಳಪಟ್ಟಾಗ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ಆದರೂ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರೆಂಟೈನ್ ಆಗುತ್ತಿದ್ದೇನೆ ಎಂದು ಮಂಗಳಾ ಅಂಗಡಿ ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ವೈದ್ಯರ ಸಲಹೆ ಪಡೆಯಲು ಮಂಗಳಾ ಅಂಗಡಿ ಅವರು ವಿನಂತಿಸಿಕೊಂಡಿದ್ದಾರೆ
ಬೆಳಗಾವಿ ಲೋಕಸಭೆ ಪ್ರಚಾರದಲ್ಲಿ ಭಾಗಿ ಆಗಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ, ಆನಂದ ಮಾಮನಿ, ಎಂ.ಬಿ. ಜಿರಳಿ, ಮಹೇಶ ತೆಂಗಿನ ಕಾಯಿ ಅವರಿಗೆ ಕರೋನಾ ಪಾಸಿಟಿವ್ ಬಂದಿತ್ತು.