ಬೆಳಗಾವಿ ಜಿಲ್ಲೆ ಪ್ರಭಾವಿ ನಾಯಕ ಇನ್ನಿಲ್ಲ..!

ಜಿಲ್ಲೆಯ ಪ್ರಭಾವಿ ನಾಯಕ ಇನ್ನಿಲ್ಲ..!
ಮಹಾಂತೇಶ ಇರಳಿ
ಬೆಳಗಾವಿ: ಸತತ ನಾಲ್ಕು ಬಾರಿ ಕಾಂಗ್ರಸ್ ಪಕ್ಷದಿಂದ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಿಂದ ಸಂಸದರಾಗಿದ್ದ ಎಸ್ ಬಿ ಸಿದ್ನಾಳ (86) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕಾಂಗ್ರಸ್ ಪ್ರಭಾವಿ ನಾಯಕ ಜಿಲ್ಲೆ ಹಿರಿಯ ರಾಜಕಾರಣಿ
ಎಸ್ ಬಿ ಸಿದ್ದಾಳ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಸಿದ್ನಾಳ ಅವರು ಸತತವಾಗಿ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆ ಆದವರು, ಇವರು 1980 ರಿಂದ 1991 ರ ವರೆಗೆ ಬೆಳಗಾವಿ ಲೋಕಸಭಾ ಸದಸ್ಯರಾಗಿದ್ದರು.
ಸಿದ್ನಾಳ್, ಮೂಲತಃ ಬೈಲಹೊಂಗಲ ತಾಲೂಕು ಸಾಣಿಕೊಪ್ಪದವರು. ಎಸ್.ಬಿ.ಸಿದ್ನಾಳ ಅವರು ಉದ್ಯಮಿ ಶಶಿಕಾಂತ ಸಿದ್ನಾಳ ಅವರ ತಂದೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಸಿದ್ನಾಳ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.