ಟಾಪ್ ಸ್ಟೋರಿ
ಚೆನ್ನೈ ಸೂಪರ್ ಕಿಂಗ್ಸ್ ಚೇರ್ಮನ್ ನಿಧನ..!

ಚೆನ್ನೈ ಸೂಪರ್ ಕಿಂಗ್ಸ್ ಚೇರ್ಮನ್ ನಿಧನ..!
ಮಹಾಂತೇಶ ಇರಳಿ
ಚೆನ್ನೈ: ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಎಲ್ ಸಬರತ್ನಮ್ (80) ಚೆನ್ನೈನಲ್ಲಿ ನಿಧನರಾದರು,
ಸಬರತ್ನಮ್ ಉದ್ಯಮ ವಲಯದಲ್ಲಿ ಚಿರಪರಿಚಿತರಾಗಿದ್ದರು ಮತ್ತು ಮದ್ರಾಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಚೆಟ್ಟಿನಾಡ್ ಸಿಮೆಂಟ್ ನ ಕಾರ್ಯನಿರ್ವಾಹಕ ನಿರ್ದೇಶಕ, ನೋರ್ಡ್ ಆಫ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲೀಮಿಟೇಡ್. ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿ, ನಲ್ಲಿ ದೀರ್ಘಕಾಲದ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಅವರು ಸಂಗೀತ ಅಕಾಡೆಮಿ, ಭಾರತೀಯ ವಿದ್ಯಾ ಭವನಗಳ ಪೋಷಕರಾಗಿದ್ದರು ಟಿ ಎಸ್ ನಾರಾಯಣಸ್ವಾಮಿ ಕಾಲೇಜಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ ಅಣ್ಣಾಮಲೈ ಕಲೆ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದರು.