ವೈದ್ಯರ ಚಿಕಿತ್ಸೆ, ಅಭಿಮಾನಿಗಳ ಹಾರೈಕೆ; ಕೊರೊನಾ ಗೆದ್ದ ಲಕ್ಷ್ಮೀ ಹೆಬ್ಬಾಳಕರ ಕುಟುಂಬ

ಲಕ್ಷ್ಮಿ ಹೆಬ್ಬಾಳಕರ್ ಕರೋನಾ ಮುಕ್ತ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಳಗಾವಿ: ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಅಬ್ಬರದ ಪ್ರಚಾರ ನಡೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮಹಾಮಾರಿ ಕರೋನಾ ಸೋಂಕು ಅಂಟಿಕೊಂಡಿತ್ತು. ಈಗ ಸಂಪೂರ್ಣ ಗುಣಮುಖರಾದ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಮೇ 15 ರಂದು ಕೊರೊನಾ ಸೋಂಕು ಕಾಣಿಕೊಂಡಿದರಿಂದ ಲಕ್ಷ್ಮಿ ಹೆಬ್ಬಾಳಕ್ ಮತ್ತು ಕುಟುಂಬ ಆರಂಭದಲ್ಲಿ ಹೋಮ್ ಐಸೋಲೇಷನನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದ್ರೆ ಕಳೆದ ಆರು ದಿನಗಳ ಹಿಂದೆ ರೋಗದ ಗುಣಲಕ್ಷಣ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆರು ದಿನಗಳ ಬಳಿಕ ಲಕ್ಷ್ಮೀ ಹೆಬ್ಬಾಳಕರ, ಮತ್ತು ಕುಟುಂಬ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಪ ಚುನಾವಣೆಯ ಪ್ರಚಾರದ ವೇಳೆ ಬೆಳಗಾವಿ ಗ್ರಾಮಿಣ ಕ್ಷೆತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ರಿಂದ ಅವರ ಜತೆ ಸಂಪರ್ಕಕ್ಕೆ ಬಂದಿದ್ದ 18 ಜನ ಕುಟುಂಬ ಸದಸ್ಯರಿಗೂ ಕೂಡಾ ಸೋಂಕು ದೃಢ ಪಟ್ಟಿತ್ತು. ಇಂದು ಸಂಪೂರ್ಣ ಗುಣಮುಖರಾದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಅವರ ಕುಟುಂಬ 18 ಜನರ ಪೈಕಿ 5 ಗುಣಮುಖರಾಗಿ ನಗರದ ಖಾಸಗಿ ಆಸ್ಪತ್ರೆಯಿಂದ ಬಿಡಗಡೆ ಆಗಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಅವರ ತಾಯಿ, ಇಬ್ಬರು ಸಹೋದರಿಯರು ಹಾಗೂ ಅಡುಗೆ ಭಟ್ ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.
ಆಸ್ಪತ್ರೆ ವೈದ್ಯ ಮಾಧವ ಪ್ರಭು ನೇತೃತ್ವದ ವೈದ್ಯಕೀಯ ತಂಡ ಲಕ್ಷ್ಮಿ ಹೆಬ್ಬಾಳಕರ ಕುಟುಂಬಕ್ಕೆ ಚಿಕಿತ್ಸೆ ನೀಡಿದೆ