ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೆ ಪರಿಹಾರ: ಲಕ್ಷ್ಮಿ ಹೆಬ್ಬಾಳಕರ್

ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೆ ಪರಿಹಾರ: ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ಒಂದು ವಾರ ಇಲ್ಲವೇ 10 ದಿನ ಲಾಕ್‌ಡೌನ್ ಮಾಡಿದ್ರೆ ಸೂಕ್ತವಾಗಿರುತ್ತದೆ.ಸಿಎಂ ಹಾಗೂ ಸರ್ಕಾರಕ್ಕೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಮಾಡಬೇಕು. ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಮನವಿ ಮಾಡಿದರು.
ಬೆಳಗಾವಿಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮುಂಚೆ 90 ದಿನ ಕರ್ಫ್ಯೂ ಇತ್ತು, ಇದರಿಂದ ಏನೇನು ಅನಾನುಕೂಲ ಆಗಿತ್ತು ಅನುಭವಿಸಿದ್ದೇವೆ, ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ಫ್ಯೂ ಜಾರಿ ಮಾಡದಿದರೆ ಇನ್ನೂ ಅತಿರೇಕಕ್ಕೆ ಹೋಗಬಹುದು, ಜನತಾ ಕರ್ಫ್ಯೂ ಮಾಡಿದ್ರೆ ನಮ್ಮ ಜನರಿಗೆ ತಿಳುವಳಿಕೆ ಬರ್ತಿಲ್ಲ. ಜನರಿಗೆ ತಿಳುವಳಿಕೆ ಬರಬೇಕಂದ್ರೆ ಲಾಕ್‌ಡೌನ್ ಒಂದೇ ಪರಿಹಾರ ಎಂದು ತಿಳಿಸಿದರು.
ಮೇ 15ರಂದು ನಮ್ಮ ಕುಟುಂಬದ 18 ಜನರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ನಮ್ಮನ್ನ ಹಿಡಿಕೊಂಡು ಬಹಳ ಜನರು ನೆಗ್ಲಿಜೆನ್ಸಿ ಮಾಡಿದ್ದೇವೆ. ವೈದ್ಯರು ಹೇಳಿದ್ರೂ ನೆಗ್ಲೆಕ್ಟ್ ಮಾಡ್ತಿದ್ವಿ ಎಂದು, ಆದರು ನಾವು ನೆಗ್ಲೆಕ್ಟ್ ಮಾಡಿದ್ದೇವೆ. ಇಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು. ಎನೆ ಸಮಸ್ಯೆ ಆದರು, ರಾತ್ರಿ ಮೂರು ಗಂಟೆಗೆ ಬಂದು ವೈದ್ಯರು ಅಟೆಂಡ್ ಮಾಡ್ತಿದ್ರು. ತಮ್ಮ ಜೀವದ ಹಂಗು ತೊರೆದು ವೈದ್ಯರು ನಮಗೆ ಸಹಾಯ ಮಾಡ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಜನತೆ, ನನ್ನ ಕ್ಷೇತ್ರದ ಜನರಿಗೆ ಧನ್ಯವಾದ ಹೇಳಲು ಬಯಸುವೆ, ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುವೆ. ಕಳೆದ ಒಂದು ತಿಂಗಳಿಂದ ಬ್ಯುಸಿಯಾಗಿ ಬಹಳ ಎಕ್ಸ್‌ಪೋಸ್ ಆಗಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಜನರು ದಯವಿಟ್ಟು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಲ್ಲರೂ ಕಾಯ್ದುಕೊಳ್ಳಬೇಕು. ಕೊರೊನಾ ಬಗ್ಗೆ ಭಯ ಬೇಡ ಮುಂಜಾಗ್ರತೆ ಕೈಗೊಳ್ಳಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.