ಕುಂದಾನಗರಿ ರೌಂಡ್ಸ್ ಹಾಕಿದ ಡಿಸಿಪಿ ಯಶೋಧಾ ವಂಟಗೂಡಿ

ಗಡಿಯಲ್ಲಿ ಡಿಸಿಪಿ ರೌಂಡ್ಸ್: ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಅಧಿಕಾರಿಗಳು ಕಾಣೆ: ಕೆರಳಿ ಕೆಂಡವಾದ ಡಿಸಿಪಿ
ಶ್ರೀನಿವಾಸ ಪಟ್ಟಣ
ಬೆಳಗಾವಿ: ರಾಜ್ಯ ಸರಕಾರ ಕಳೆದ ಒಂದು ವಾರದಿಂದ ಲಾಕಡೌನ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೆ ಮಾಡಿ, ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಬೆಳಗಾವಿಯಲ್ಲಿ ಸಕಾರಾತ್ಮಕ ರೆಸ್ಪಾನ್ಸ್ ಸಿಕ್ಕರೆ, ಗಡಿ ಹತ್ತಿರ ಮಾತ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ ಎದ್ದು ಕಾಣುತ್ತದೆ. ಮತ್ತು ಇದರಿಂದ ಮಹಾರಾಷ್ಟ್ರದಿಂದ ಅನೇಕ ಜನರು ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಆರಾಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವೇಶ ಮಾಡುತ್ತಿದ್ದಾರೆ.
ಈ ವಿಷಯ ತಿಳಿದು ಡಿಸಿಪಿ ಯಶೋಧ ವಂಟಗೋಡೆ ಅವರು ಬೆಳಗಾವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಡಿಭಾಗದಲ್ಲಿರುವ ಶಿನ್ನೂಳ್ಳಿ ಬಳಿ ಇರುವ ಮಾಚಿ ಗ್ರಾಮದ ಚೆಕ್ ಪೋಸ್ಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಗಡಿಯಿಂದ ಕದ್ದು ಮುಚ್ಚಿ ಬರುವವರನ್ನು ಅಲ್ಲಿಯೇ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಕೋವಿಡ್ ವರದಿಯನ್ನು ನೋಡಬೇಕು. ಆದರೆ ಇಲ್ಲಿ ಪೊಲೀಸರು ತಮ್ಮ ಕಾರ್ಯದಲ್ಲಿ ಇದ್ದರೆ, ಇತ್ತ ಆರೋಗ್ಯ ಇಲಾಖೆಯ ತಂಡ ಇಲ್ಲದಿರುವುದಕ್ಕೆ ಡಿಸಿಪಿ ಅಸಮಾಧಾನ ವ್ಯಕ್ತಪಡಿಸಿ, ಈ ವಿಷಯವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತರುತ್ತೇನೆಂದು ತಿಳಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳ್ಳಮಾರ್ಗದಿಂದ ಕೆಲವು ಜನ ಪ್ರವೇಶ ಮಾಡುತ್ತಿದ್ದಾರೆ. ಆದರೆ ಈ ರೀತಿ ಮಾಡುವುದು ತಪ್ಪು, ಯಾರೇ ಗಡಿ ಒಳಗಡೆ ಬರುವವರಿದ್ದರೆ ನೆಗೆಟಿವ್ ರಿಪೋರ್ಟ್ ತೊರಿಸಬೇಕು. ಶಿನ್ನೂಳಿ ಚೆಕ್ ಪೊಸ್ಟ್ ಬಳಿ ಆರೋಗ್ಯ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.