ವೀಕೆಂಡ್ ಕರ್ಪ್ಯೂ; ಹಸಿದವರಿಗೆ ಅನ್ನದಾಸೋಹ ಶಾಸಕ ಅನಿಲ ಬೆನಕೆ

ಬೆಳಗಾವಿ:ಕೋವಿಡ್ -19 ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯದಾದ್ಯಂತ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವು ಬಂದ ಇರಲಿದ್ದು, ಅವಶ್ಯಕತೆ ಇರುವವರಿಗೆ ಸಹಾಯ ಹಸ್ತ ನೀಡಲು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಮುಂದಾಗಿದ್ದಾರೆ.
ಇಂದು ಅವರು ತಮ್ಮ ಕಾರ್ಯಕರ್ತರೊಂದಿಗೆ ಅವಶ್ಯಕತೆ ಇರುವ ಬಡ ಜನರಿಗೆ ಆಹಾರ ವಿತರಿಸಲು ಮುಂದಾಗಿದ್ದರು, ತಮ್ಮ ಕರ್ಯಕರ್ತರೊಂದಿಗೆ ಆಹಾರದ ಪ್ಯಾಕೆಟ್ ಗಳನ್ನು ಪ್ಯಾಕ್ ಮಾಡಿ, ವಿತರಿಸುವ ಕೆಲಸಕ್ಕೆ ಅನಿಲ ಬೆನಕೆ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿರುವ ಅವರು, ಕೋವಿಡ್ -19 ಎರಡನೇ ಅಲೆ ಈಗ ಎದುರಿಸುವ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಶನಿವಾರ ಮತ್ತು ಭಾನುವಾರ ಲಾಕ್ ಡೌನ್ ಎಂದು ಘೋಷಣೆ ಮಾಡಿದ ಮೇಲೆ ಭಾರತೀಯ ಜನತಾ ಪಾರ್ಟಿ ಮತ್ತು ಗುರಿ ರೋಡ್ ಲೈನ್ ಸಂಯೋಗದಿಂದ ಸೇವೆ ಮಾಡಲು ಮುಂದಾಗಿದ್ದೇವೆ ಎಂದು ಅನೀಲ ಬೆನಕೆ ಅವರು ತಿಳಿಸಿದರು.
ವೀಕೆಂಡ್ ಕರ್ಫೂಯಿಂದ ಯಾರಿಗೆ ಸಮಸ್ಯೆ ಆಗುತ್ತದೆ ರಸ್ತೆಯ ಮೇಲೆ ಯಾರು ವಾಸ ಮಾಡುತ್ತಾರೆ ಅವರಿಗೆ ಆಹಾರ ವಿತರಿಸುವ ಕೇಲಸ ಮಾಡುತ್ತಿದ್ದೇವೆ. ರಾತ್ರಿ ವೇಳೆ ಕೆಲಸ ಮಾಡುವ ಕರೋನಾ ಸೈನಿಕರಿಗೆ ಚಹಾದ ವ್ಯೆವಸ್ಥೆ ಮಾಡುತ್ತಿದ್ದೇವೆ.ಲಾಕ್ ಡೌನ್ ಇರುವ ವರೆಗೆ ಈ ವಿತರಣಾ ಕಾರ್ಯಕ್ರಮ ನಡೆಯಲಿದೆ. ಯಾರಿಗೆ ಅವಶ್ಯಕತೆ ಇದಿಯೋ ಅವರು ಇದರ ಉಪಯೋಗ ಪಡೆಯಬೇಕು. ಜೊತೆಗೆ ಲಾಕ್ ಡೌನ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. .
ಒಟ್ನಲ್ಲಿ ಕೋವಿಡ್-19 ರೋಗ ಸೃಷ್ಠಿಸುತ್ತಿರುವ ಅವಾಂತರಕ್ಕೆ ಜನರಿಗೆ ತೋಂದರ ಆಗಬಾರದು ಎಂದು ಜನರ ನರವಿಗೆ ನಾ ಇದ್ದೇನೆ ಎನ್ನುತ್ತಿರುವ ಅನಿಲ ಬೆನಕೆ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ ಆಗಿತ್ತಿದೆ.