ಲಾಠಿ ಬಿಟ್ಟು ಜೀವ ಜೀವನ ಉಳಿಬೇಕು ಎಂದ ಭಾಸ್ಕರ ರಾವ್

ಭಾಸ್ಕರ್ ರಾವ್ ಸಿಟಿ ರೌಂಡ್ಸ್: ಲಾಠಿ ಬಿಟ್ಟು ಕೆಲಸ ಮಾಡಲು ಪೊಲೀಸರಿಗೆ ಸಲಹೆ.
ಬೆಳಗಾವಿ:ಪೊಲೀಸ್ ಸಿಬ್ಬಂದಿಗಳು ಲಾಠಿ ಇಲ್ಲದೆ ಕೆಲಸ ಮಾಡಬೇಕು. ಜನರ ಜೀವನ ಮತ್ತು ಜೀವ ಎರಡು ನಡೆಯಬೇಕು ಎಂದು ಕರೋನಾ ನಿಯಂತ್ರಣ ವಿಶೇಷ ಅಧಿಕಾರಿ ಭಾಷ್ಕರ್ ರಾವ್ ಅವರು ತಿಳಿಸಿದ್ದಾರೆ.
ಕರೋನಾ ರಣಕೇಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫೂ ವಿಧಿಸಿದ್ದು, ಇಂದು ಮತ್ತು ನಾಳೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೇಲ್ಲವೂ ಬಂದ್ ಇರಲಿದ್ದೆ. ಬೆಳಗಾವಿಯಲ್ಲೂ ಸಹ ವಿಕೇಂಡ್ ಕರ್ಫೂಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕರೋನಾ ನಿಯಂತ್ರಣ ವಿಶೇಷ ಅಧಿಕಾರಿ ಭಾಷ್ಕರ್ ರಾವ್ ಅವರು ಸಿಟಿ ರೌಂಡ್ಸ್ ಹಾಕಿ ಪರಿಶೀಲನೆ ನಡೆಸಿದ್ದಾರೆ.
ವೀಕೆಂಡ್ ಲಾಕ್ ಡೌನ್ ನಿಮಿತ್ಯ ಸಿಟಿ ರೌಂಡ್ ಹಾಕಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಇದು ಯುದ್ಧದ ಸಮಯ, ರಾಜ್ಯ ಸರ್ಕಾರದಿಂದ ಏನು ಸೂಚನೆ ಬರುತ್ತದೆಯೊ ಆ ಸೂಚನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತೆ, ಅದರಲ್ಲಿ ಯಾವುದೇ ಮೂಲಾಜಿಲ್ಲಾ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಕೆಲಸ ಕಟ್ಟುನಿಟ್ಟಗಿ ಮಾಡಬೇಕು. ಸಭೆ ಸಮಾರಂಭ ಅಂತ ಮಾಡಿ ಜಾಸ್ತಿ ವೇಳೆ ಸಮಯ ಹಾಳು ಮಾಡಬಾರದು. ಆದರೆ ಕಳೆದ ಭಾರಿ ನಡೆದ ರೀತಿಯಲ್ಲಿ ಲಾಕ್ ಡೌನ ಮಾಡುವುದಕ್ಕೆ ಆಗೋವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ನಾಗರಿಕರು ಸಹ ನಾವೇ ನಾಯಕರು ಎಂದು ತಿಳಿದು ತಮಗೆ ಸಾಧ್ಯವಾದರೆ ಮಾಸ್ಕ್ ವಿತರಣೆ ಮಾಡಬೇಕು. ಸೋಮವಾರ ಮುಂಜಾನೆ ೬ ರ ವರೆಗೆ ಲಾಕ್ ಡೌನ್ ಇರುತ್ತದೆ ಎಂಬ ಮಾಹಿತಿಯನ್ನು ಅವರು ನೀಡಿದರು.