ಆ ಮೆನೆಯಲ್ಲಿ 35 ವರ್ಷದ ಬಳಿಕ ಹುಟ್ಟಿದ ಲಕ್ಷ್ಮಿ ; ಆ ಕುಟುಂಬ ಮಾಡಿದ್ದೇನು ಗೋತ್ತಾ..?

ಮಹಾಂತೇಶ ಇರಳಿ
ಜೈಪೂರ:- 35 ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ಕಾರಣಕ್ಕಾಗಿ,4.5 ಲಕ್ಷ ರು ಹಣ ಖರ್ಚು ಮಾಡಿ ಹೆಲಿಕಾಪ್ಟರ್ ನಲ್ಲಿ ತಮ್ಮ ಕುಟುಂಬದ ಮೊಟ್ಟ ಮೊದಲ ಹೆಣ್ಣು ಮಗುವನ್ನು ಮನೆಗೆ ಕರೆ ತಂದಿದ್ದಾರೆ.
ಹೌದು ನಾಗೂರು ಜಿಲ್ಲೆಯ ನಿಂಬ್ಡಿ ಚಂಡವಾತ ಗ್ರಾಮದ, ರಿಯಾ 2 ತಿಂಗಳ ಹಿಂದೆ ತನ್ನ ತಾಯಿಯ ತವರು ಮನೆಯಲ್ಲಿ ಜನಿಸಿದ್ದಳು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಾಯಿ ಮತ್ತು ಮಗುವಿಗೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಿದರು.
ಹೆಣ್ಣು ಮಗು ಬೇಕೇಂಬ ಕುಟುಂಬ ಸದಸ್ಯರ ಆಸೆ ಅಂತಿಮವಾಗಿ ಈಡೇರಿದಾಗ, ರಿಯಾ ತಾತ ಹೆಲಿಕಾಪ್ಟರ್‌ನಲ್ಲಿ ಬಾಲಕಿಯನ್ನು ಮನೆಗೆ ಕರೆತರಲು ನಿರ್ಧರಿಸಿದರು. ಇದಕ್ಕಾಗಿ ಅವರು ಜಿಲ್ಲಾಧಿಕಾರಿಯಿಂದ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ಪಡೆದರು. ಇದಕ್ಕೆ ಅಲ್ಲಿಯ ಜಿಲ್ಲಾಡಳಿತ ಕೂಡಸ ಸಾಥ ನೀಡಿದೆ..
ರಿಯಾ ಚಾಪರ್ ಸವಾರಿ ಮತ್ತು ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ಇನ್ನೂ ಆಚರಣೆಯಲ್ಲಿರುವ ಗಂಡು-ಹೆಣ್ಣಿನ ಅಸಮಾನತೆ ಹೋಗಲಾಡಿಸಲು ಇದೊಂದು ಉದಾಹರಣೆ ಆಗಿದೆ. ಹೆಣ್ಣು ಮಗು ಹುಟ್ಟುವುದೇ ಶಾಪ ಎಂದುಕೊಳ್ಳುವ ಇಂದಿನ ಸಮಾಜದಲ್ಲಿ ರಿಯಾ ಹುಟ್ಟಿದ ಆಚರಣೆಯಿಂದ ಜನ ಹೆಣ್ಣುಮಕ್ಕಳ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.