ಬಾಡಿ ಹೋದ ಹೂ ಮಾರಾಟಗಾರರ ಬದಕು..!

ಶ್ರೀನಿವಾಸ ಪಟ್ಟಣ
ಬೆಳಗಾವಿ: ಕೊರೊನಾ ವೈರುಣುವಿನ ಚೈನ್ ಬ್ರೇಕ್ ಮಾಡಲು ರಾಜ್ಯ ಸರಕಾರ ಮತ್ತೆ ಲಾಕ್ ಡೌನ್ ಮೂರೆ ಹೋಗಿದೆ. ಆದರೆ ಇದು ಎಷ್ಟೊಂದು ಏಕಪಕ್ಷೀಯ ನಿರ್ಧಾರಿಂದ ಶ್ರೀ ಸಾಮನ್ಯರ ಬದಕು ನರಕವಾಗುತ್ತಿದೆ ಅನ್ನೊದಕ್ಕೆ ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಲಾಕ ಡೌನ್ ನಿಂದ ಬೆಳಗಾವಿಯ ಹೂ ಬೆಳೆಗಾರರಿಗೆ ತೀವ್ರ ನಷ್ಟವಾಗಿದ್ದರಿಂದ ದಿಕ್ಕು ತೋಚದ ಹೂ ಬೆಳೆಗಾರರು ಶುಕ್ರವಾದ ಗೋಕಾಕ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಹೂ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ ಬಳಿಯ ದುಂಡಾಪುರ, ಗಣೇಶವಾಡಿ ಗ್ರಾಮದ ರೈತರು ಮಾರುಕಟ್ಟೆ ಕುಸಿತದಿಂದ ಕಂಗಾಲಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಿಕ್ಕುಗಾಣದ ಹೂ ಬೆಳೆಗಾರರು ಗೋಕಾಕ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಹೂ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೂ ಬೆಳೆದ ರೈತ ರಾಮಪ್ಪ ಸಿದ್ದಪ್ಪ ರಾಜಾಪುರ ಮಾತನಾಡಿ, ಕಳೆದ ವರ್ಷ 2 ಎಕರೆಯಲ್ಲಿ ಹೂ ಬೆಳೆದಿದ್ದೆ.ಲಾಕ್‍ಡೌನ್ ಆಗಿ ಮಾರುಕಟ್ಟೆಯೇ ಸಿಗಲಿಲ್ಲ. ಹೂಡಿದ ಬಂಡವಾಳವೂ ದೊರೆಯದೇ ನಷ್ಟ ಅನುಭವಿಸಿದೆ. ಈ ಬಾರಿ ಸಾವಿರಾರು ಆಸೆಗಳನ್ನು ಹೊತ್ತು 5 ಎಕರೆಯಲ್ಲಿ ಹೂ ಬೆಳೆದು ನಷ್ಟ ತುಂಬಿಕೊಳ್ಳೋಣ, ಸಾಲ ಮುಟ್ಟಿಸೋಣ ಎಂದುಕೊಂಡಿದ್ದೆ. ಹೇಗಿದ್ದರು ಮದುವೆ ಹಬ್ಬ ಹರಿದಿನಗಳ ಸಿಸನ್ ಇದೆ ಲಾಭದ ನೀರಿಕ್ಷೆಯಲ್ಲಿ ಇದಿವಿ ಆದರೆ, ಸರಕಾರ ಲಾಕ್‍ಡೌನ್ ಮಾಡಿ ನಮ್ಮಂತವರ ಜೀವನ ಜತೆ ಚಲ್ಲಾಟವಾಡುತ್ತಿದೆ ಎಂದರು.
ಒಟ್ಟಿನಲ್ಲಿ ಲಾಕ್‍ಡೌನ್‍ನಿಂದ ಹೂ ಬೆಳೆದವರು ಕಂಗಾಲಾಗಿದ್ದಾರೆ. ನಮಗಾದ ನಷ್ಟಕ್ಕೆ ಯಾರು ಹೊಣೆ ಎಂಬ ಅಳಲು ಮಾತ್ರ ಸರಕಾರದ ಮೊಂಡತನ ಕಿವಿಗಳಿಗೆ ಕೆಳುತ್ತೋ ಇಲ್ವಾ ಆ ಭಗವಂತನೆ ಬಲ್ಲ ಅನ್ನು ಸ್ಥಿತಿ ನಿರ್ಮಾಣವಾಗಿದೆ