ಕರ್ನಾಟಕ

ಬಡ ವ್ಯಾಪಾರಸ್ಥರ ಪರ ನಿಂತ ಶಾಸಕ‌ ಅನಿಲ್ ಬೆನಕೆ; ವೀಕೆಂಡ್ ಕರ್ಪ್ಯೂ ಓಕೆ ಟಫ್ ರೂಲ್ಸ್ ಬೇಡಾ

ಬೆಳಗಾವಿ: ಕೊರೊನಾಗಿಂತ ಜನರಿಗೆ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.‌ ಕೊರೊನಾ ಬಂದರೂ ಅಡ್ಡಿ ಇಲ್ಲ. ಆದರೆ ಏಕಾಎಕಿ ಬಂದ್ ಮಾಡುವುದು ಬೇಡ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ‌.‌

ಇಂದು ನಗರ ಡಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ಬೆಳಗಾವಿಯಲ್ಲಿ ಅಂಗಡಿ ಬಂದ್ ಮಾಡಿದ್ದರಿಂದ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ.‌ ಕೋವಿಡ್ ಹೊಸ ಗೈಡ್‌ಲೈನ್ಸ್ ಚೇಂಜ್ ಮಾಡುವ ಬಗ್ಗೆ ಸರ್ಕಾರ ಕೂಡಲೆ ಚರ್ಚೆ ಮಾಡಬೇಕು.‌ಬೇಕರಿ, ತಂಪು ಪಾನೀಯ, ವಾಹನಗಳ ಸ್ಪೇರ್ ಪಾರ್ಟ್ಸ್, ಸ್ವೀಟ್ ಮಾರ್ಟ್, ಬೀದಿ ಬದಿ ವ್ಯಾಪಾರಿಗಳಿಗೆ ಗೊಂದಲ ಉಂಟಾಗದಂತೆ ಸರ್ಕಾರ ನಿರ್ಣಯ ಕೈ ಗೊಳ್ಳಬೇಕು ಎಂದು ಮನವಿ ಮಾಡಿದರು.‌

ಗೈಡ್‌ಲೈನ್ಸ್ ಬಲಾವಣೆಗೆ ಅನಿಲ ಬೆನಕೆ ಆಗ್ರಹ.

ಜನರು ಚಿಕ್ಕ ಪುಟ್ಟ ವ್ಯವಸಾಯ ನಡೆಸುವ ಬಗ್ಗೆ ಸರ್ಕಾರ ಗಮನಿಸಬೇಕು.‌ ಶನಿವಾರ, ರವಿವಾರ ಲಾಕ್‌ಡೌನ್ ಮಾಡಿದ್ರೆ ಜನ್ರು ಒಪ್ಪಿಕೊಳ್ಳುತ್ತಾರೆ. ಲಾಕ್‌ಡೌನ್ ಗಿಂತ ಕೆಟ್ಟ ಪರಿಸ್ಥಿತಿ ಮಾಡಿದ್ದು ಇದು ನಡೆಯಲ್ಲ, ಜನರ ಸಮಸ್ಯೆ ತಿಳಿದುಕೊಳ್ಳಿ, ಫಾಲ್ತು ಅಡ್ಡಾಡೋರನ್ನ ಬಿಡ್ತೀರಿ ಎಂದು ಗರಂ ಆದರು.‌

ಕೆಲವು ಮಾಲ್‌ಗಳು ಸ್ಟಾರ್ಟ್ ಇದ್ದು ಸಣ್ಣ ಅಂಗಡಿಗಳನ್ನ ಬಂದ್ ಮಾಡಿಸಿದ್ದಾರೆ. ಪಾರದರ್ಶಕ ವಾಗಿ ಕೋವಿಡ್ ನಿಯಮ ಜಾರಿಗೆ ಬರಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗಾದರೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು.‌ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ನಾವು ನೇರವಾಗಿ ಹೇಳುತ್ತೇವೆ.‌ ಜನರ ಪರವಾಗಿ ನಾವು ನಿಲ್ಲಬೇಕಾಗುತ್ತೆ.‌ವ್ಯವಸಾಯ ನಡೇಯಬೇಕು, ಕೈಗಾರಿಕೆ ಸ್ಟಾರ್ಟ್ ಮಾಡಿದ್ದು, ಅವರೆಲ್ಲಿ ಊಟಕ್ಕೆ ಹೋಗಬೇಕು. ಗೈಡಲೈನ್ಸ್ ಕನ್ಫ್ಯೂಷನ್‌ನಲ್ಲಿದೆ, ಜನರ ಪರವಾಗಿ ಗೈಡ್‌ಲೈನ್ಸ್ ಜಾರಿಗೆ ಬರಬೇಕು ಎಂದು ರಾಜ್ಯಸರ್ಕಾರಕ್ಕೆ ಬಿಜೆಪಿ ಶಾಸಕ ಅನಿಲ್ ಬೆನಕೆ ಒತ್ತಯ ಮಾಡಿದ್ದಾರೆ.

ಈ ವೇಳೆ ಹೋಟೆಲ್ ಮಾಲೀಕರ ಸಂಘ, ಶಾಮಿಯಾನ ಮಾಲೀಕರ ಸಂಘ ಆಟೋಮೊಬೈಲ್ ಅಂಗಡಿಗಳ ಮಾಲೀಕರು ಸೇರಿ ವಿವಿಧ ವ್ಯಾಪಾರಸ್ಥರ ಜೊತೆ ಆಗಮಿಸಿದ ಅನಿಲ ಬೆನಕೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!