ಟಫ್ ರೂಲ್ಸ್ ಶಾಸಕ ಅಭಯ ಪಾಟೀಲ್ ಬೇಸರ

ಬೆಳಗಾವಿ:ಬೇಕಾಬಿಟ್ಟಿಯಾಗಿ ಮುಂಜಾನೆಯೊಂದು ಸಂಜೆಯೊಂದು ಗೈಡ್‌ಲೈನ್ಸ್ ಮಾಡಬಾರದು ಎಂದು ಕೋವಿಡ್ ಪರಿಷ್ಕೃತ ಮಾರ್ಗಸೂಚಿಗೆ ತಮ್ಮದೇ ಸರ್ಕಾರದ ರೂಲ್ಸ್ ವಿರುದ್ಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ಕಿಡಿ ಕಾರಿದ್ದಾರೆ.
ಹೊಸ ನಿಯಮಾವಳಿಯಿಂದ ಗ್ರಾಹಕರು, ವ್ಯಾಪಾರಸ್ಥರಿಗೆ ಅನಾನೂಕುಲವಾಗುತ್ತಿದೆ. ಗ್ರಾಹಕರು, ವ್ಯಾಪಾರಸ್ಥರಿಗೆ ಆಗುತ್ತಿರುವ ಅನಾನೂಕುಲ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ಹೊಸ ಗೈಡ್‌ಲೈನ್ಸ್ ಜಾರಿ ತರೋದಾದ್ರೆ ಜನರಿಗೆ ತಿಳಿಸಿ ಮಾಡಬೇಕು, ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಬಿಜೆಪಿ ಶಾಸಕ ಅಭಯ್ ಪಾಟೀಲ್, ಸರ್ಕಾರದ ಈ ನಿರ್ಧಾರದ ವಿರುದ್ಧ ಗರಂ ಆಗಿದ್ದಾರೆ.
ದಿಢೀರ್ ಅಂತಾ ಹೊಸ ಮಾರ್ಗಸೂಚಿ ಜಾರಿ ತಂದ್ರೆ ಬೀದಿ ವ್ಯಾಪಾರಿಗಳು, ವ್ಯಾಪಾರಸ್ಥರು, ಗ್ರಾಹಕರಿಗೆ ಅನಾನೂಕುಲ ಆಗ್ತಿದೆ. ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಹಾಗೇ ಗೈಡ್‌ಲೈನ್ಸ್ ತರಬಾರದು. ಹೊಸ ಮಾರ್ಗಸೂಚಿ ಜಾರಿಗೂ ಎರಡು ದಿವಸ ಮುನ್ನ ಹೇಳಿದ್ರೆ ಜನ ಹೊಂದಿಕೊಳ್ಳೋ ಪ್ರಯತ್ನ ಮಾಡ್ತಾರೆ.
ಜನರಿಗಾಗಿ ಸರ್ಕಾರ ನಿಯಮ ಜಾರಿ ತರುತ್ತಿದೆ ಎಂದೂ ಗೊತ್ತಿದೆ. ಆದರೆ ಬೇಕಾಬಿಟ್ಟಿಯಾಗಿ ಮುಂಜಾನೆಯೊಂದು ಸಂಜೆಯೊಂದು ಗೈಡ್‌ಲೈನ್ಸ್ ಮಾಡಬಾರದು ಎಂದು ಅವರು ಹೇಳಿದ್ದಾರೆ.