ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡಿದ ಬಿಮ್ಸ್: ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕಳುಹಿಸುವ ಬದಲು ಮನೆಗೆ ಕಳುಹಿಸಿ ಯಡವಟ್ಟು

ಶ್ರೀನಿವಾಸ ಪಟ್ಟಣ
ಬೆಳಗಾವಿ:ಬಿಮ್ಸ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಧೃಡವಾಗಿದೆ. ಬಿಮ್ಸ್ ವಸತಿ ನಿಲಯಗಳಲ್ಲಿದ್ದ ಹದಿನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದ್ದು, ಕಾಲೇಜು ಆಡಳಿತ ಮಂಡಳಿ ಸೋಂಕು ಇದೆ ಎಂದು ತಿಳಿದರೂ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ.
ಇದೆ ಏಪ್ರಿಲ್ 19ರಂದು ಐವತ್ತು ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಮಾಡಲಾಗಿತ್ತು, ನಿನ್ನೆ ವಿದ್ಯಾರ್ಥಿಗಳ ವರದಿ ಬಂದಿದ್ದು, ಅದರಲ್ಲಿ ಹದಿನಾಲ್ಕು ಮೆಡಿಕಲ್ ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿದೆ. ವಿದ್ಯಾರ್ಥಿಗಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿವುದನ್ನು ಬಿಟ್ಟು ಬಿಮ್ಸ್ ಆಡಳಿತ ಮಂಡಳಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಮನೆಗೆ ಕಳುಹಿಸಿ ಬೇಜವಾಬ್ದಾರಿ ತೊರಿದೆ.
14 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ದೃಡ ಪಟ್ಟಿರುವ ಹಿನ್ನೆಲೆಯಲ್ಲಿ ವಸತಿ ನಿಲಯಗಳಲ್ಲಿದ್ದ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ ಹರಡುವ ಭೀತಿ ಶುರು ಆಗಿದೆ. ಕೊರೊನಾ ಪಾಸಿಟಿವ್ ಇದ್ರೂ ಬಿಮ್ಸ್ ವಿದ್ಯಾರ್ಥಿಗಳನ್ನು ಕಾಲೇಜು ಮಂಡಳಿ, ಮನೆಗೆ ಹೋಗಿ, ಮನೆಯಲ್ಲೇ ಕ್ವಾರೆಂಟೈನ್ ಆಗಿ ಅಂತಾ ಒತ್ತಾಯ ಪೂರ್ವಕವಾಗಿ ವಸತಿ ನಿಲಯದಿಂದ ಹೊರ ದಬ್ಬಿದೆ. ಇದರಿಂದ ಜನರಲ್ಲಿ ಮತ್ತು ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ.
ಬಿಮ್ಸ್ ಆಡಳಿತ ಮಂಡಳಿಯ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವೈದ್ಯಕೀಯ ಸಂಸ್ಥೆ ಕರೋನಾ ನಿಯಮ ಪಾಲನೆ ಮಾಡಬೇಕು. ಆದರೆ ಬಿಮ್ಸ್ ಮಾತ್ರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.