ಮೇ 4ರವರೆಗೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ : 144 ಸೆಕ್ಷನ್ ಜಾರಿ.

ಮಹಾಂತೇಶ ಇರಳಿ
ಬೆಂಗಳೂರು: ಕರೋನಾ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 14 ದಿನಗಳವರೆಗೆ ಅಂದರೆ ಮೇ 4ರವರೆಗೆ ರಾಜ್ಯದಲ್ಲಿ ನೈಟ್ ಲಾಕ್ ಡೌನ್ ಇರಿಲಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗ ಸೂಚಿಯಲ್ಲಿ ಪ್ರಕಟಿಸಿದೆ.
ಮಂಗಳವಾರ ನಡೆದ ಸರ್ವಪಕ್ಷ ಸಭೆ ಬಳಿಕ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿರುವ ಸರ್ಕಾರ, ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ವಿಧಿಸಿದ್ದು, ಶನಿವಾರ ಮತ್ತು ಭಾನುವಾರ ಇಡೀ ರಾಜ್ಯ ಫುಲ್ ಡೇ ವೀಕೆಂಡ್ ಕರ್ಫ್ಯೂ ಇರಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಯಾವುದಕ್ಕೆ ನಿರ್ಭಂದ..?
ಪ್ರಮುಖವಾಗಿ ದೇವಸ್ಥಾನದ ಪೂಜೆಗಾಗಿ ಅರ್ಚಕರಿಗೆ ಮಾತ್ರ ಸೀಮಿತಗೊಳಿದ್ದು, ಹೋಟೆಲ್, ರೆಸ್ಟೋರೆಂಟ್ನಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆ, ವ್ಯವಸಾಯ, ದಿನಸಿ ಮಳಿಗೆಗೆ ಅನುಮತಿ ಇರಲಿದ್ದು, ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಕಟ್ಟಡ ನಿರ್ಮಾಣ ಕೆಲಸ ಪ್ರತಿದಿನದಂತೆ ನಡೆಯಲಿದೆ. ಮಾಲ್ ಗಳು ಕ್ಲೋಸ್ ಆಗಲಿದೆ. ಲಿಕ್ಕರ್ ಶಾಪ್, ಬಾರ್ನಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ.
ಇ ಕಾಮರ್ಸ್ ಗೆ ಅವಕಾಶ ಇರಲಿದೆ. ಸರ್ಕಾರಿ ಕಚೇರಿ ಶೇ. 50 ರಷ್ಟು ಮಾತ್ರ ಅವಕಾಶ ನೀಡಿದ್ದು, ಐಟಿ ಬಿಟಿ ವರ್ಕ್ ಫ್ರಮ್ ಹೋಮ್ ಗೆ ಆದೇಶ ನೀಡಲಾಗಿದೆ.ಮದುವೆ ಸಮಾರಂಭದಲ್ಲಿ 50 ಜನ ಮಾತ್ರ ಭಾಗಿ ಹಾಗೂ ಶವಸಂಸ್ಕಾರದಲ್ಲಿ 30 ಜನ ಪಾಲ್ಗೊಳ್ಳಬಹುದಾಗಿದೆ.
ಕರೋನಾ ರಣಕೇಕೆ ನಡುವೆ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿದ ಸರ್ಕಾರ.
ಅಂತರಾಜ್ಯ ಓಡಾಟಕ್ಕೆ ಅವಕಾಶ ಇರಲಿದ್ದು, ಸಾರಿಗೆ ಬಸ್ಗಳಲ್ಲಿ ಶೇ.50 ಮಾತ್ರ ಅವಕಾಶ ಇರಲಿದೆ, ಅಂತರಾಜ್ಯ ಓಡಾಟಕ್ಕೆ ಯಾವುದೇ ನಿರ್ಭಂದನೆಗಳು ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ಈ ಎಲ್ಲಾ ಸಂಧರ್ಭಲ್ಲೂ 144 ಸೆಕ್ಷನ್ ಇಡೀ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ.