ಜಿಲ್ಲಾ

ಕೋವಿಡ್ ನಿಯಂತ್ರಣಕ್ಕೆ ವಿನೂತನ ಐಡಿಯಾ: ತಹಶಿಲ್ದಾರ ಐಡಿಯಾಗೆ ಬೆಚ್ಚಿದಬಿದ್ದ ಜನ

ಶ್ರೀನಿವಾಸ ಪಟ್ಟಣ

ಬೆಳಗಾವಿ: ರಾಜ್ಯ ಸರಕಾರ ಇಂದಿನಿಂದ ರಾಜ್ಯಾದ್ಯಂತ ಕೋವಿಡ್ ಹಾವಳಿ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡುತ್ತಿದೆ.‌ ಆದರೆ ನಮ್ಮ ಜನ ಸರ್ಕಾರದ ಮಾತನ್ನ ಎಲ್ಲಿ ಕೇಳ್ತಾರೆ ಹೇಳಿ ಸರ್ಕಾರದ ನಿಯಮವನ್ನು ಅಲ್ಲಗಳೆದವರಿಗೆ ತಕ್ಕ ಶಾಸ್ತಿ ಕಲಿಸಲೇಂದೆ ಅಥಣಿ ತಾಲೂಕಾಡಳಿತ ಖರ್ನಾಕ್ ಐಡಿಯಾ ಒಂದನ್ನು ಮಾಡಿದೆ.

ಹೌದು ಕೋವಿಡ್ ಎರಡನೆಯ ಅಲೆ ಗಡಿ ಜಿಲ್ಲೆಯಲ್ಲಿ ಸದ್ದಿಲ್ಲದೆ ಏರುತ್ತೀದೆ, ಆದರೆ ನಮ್ಮ ಜನಕ್ಕೂ ಒಮ್ಮೊಮ್ಮೆ ಎಷ್ಟು ಹೇಳಿದ್ರೂ ಕೇಳುವುದಿಲ್ಲ ಅದಕ್ಕಾಗಿ ಇಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಹಶಿಲ್ದಾರ ಮಾಡಿರುವ ಐಡಿಯಾಕ್ಕೆ ಜನ ಬೆಚ್ಚಿ ಬೆರಗಾಗಿದ್ದಾರೆ.‌ ಮನೆಯಿಂದ ಹೊರ ಬಂದ್ರೆ ಕಡ್ಡಾಯ ಮಾಸ್ಕ್ ಹಾಕಿಕೊಂಡೆ ಹೊರಬರುತ್ತಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಮೇ 4 ರವರೆಗೆ ಖಡಕ್ ರೂಲ್ಸ್ ಜಾರಿಯಾಗಿದ್ದು,144 ಸೆಕ್ಸನ್ ಜಾರಿಯಾಗಿದೆ.‌ ಈ ಹಿನ್ನೆಲೆ ಇಂದು ಅಥಣಿಯಲ್ಲಿ ಮಾಸ್ಕ್ ಹಾಕದ ಜನರಿಗೆ ಸ್ಥಳದಲ್ಲೆ ಹೂವಿನ ಹಾರ ಹಾಕಿ ಅಲ್ಲಯೇ ಕೋವಿಡ್ ಪರಿಕ್ಷೆ ಒಳಪಡಿಸುತ್ತಿದ್ದಾರೆ.

ಮಾಸ್ಕ ಇಲ್ಲದೆ ಬಂದ ಮಹಾನುಭಾವರಿಗೆ ಹಾರ ಹಾಕಿ, ಕೊವಿಡ್ ಪರೀಕ್ಷೆ ನಡೆಸಿದ ಅಧಿಕಾರಿಗಳು ಇದರಿಂದಾಗಿ ಜನರಲ್ಲಿ ಕೋವಿಡ್ ಅಲೆಯ ಬಗ್ಗೆ ತಿಳುವಳಿಕೆ ಮೂಡೊದೆ.‌ಇದರ ಜತೆ ಅಥಣಿ ತಹಶೀಲ್ದಾರ ದುಂಡಪ್ಪಾ ಕೋಮಾರ ನೇತೃತ್ವದಲ್ಲಿ ಜಾಗೃತಿ ಕಾರ್ಯವನ್ನು ಸಹ ಮಾಡುತ್ತಿದ್ದಾರೆ.

ಕಾರ್ಯಾಚರಣೆಗೆ ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಸಾಥ್ ನೀಡಿದ್ದಾರೆ. ಈ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಶ್ಲಾಘನೀಯ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!