ಆರ್‌ಸಿಬಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು: ಯಾಕೆ ಗೋತ್ತಾ..?

ಶ್ರೀನಿವಾಸ ಪಟ್ಟಣ
ಮುಂಬೈ: 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಆರಂಭಿಕ ಮೂರು ಪಂದ್ಯಗಳಲ್ಲಿ ಮೊಯೀನ್ ಅಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಮೊಯೀನ್ ಅಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ನೆಟ್ಟಿಗರು ಆರ್‌ಸಿಬಿವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಮೂರು ಪಂದ್ಯಗಳಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಮೊಯೀನ್ ಅಲಿ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಆಡಿದ ಪಂದ್ಯದಲ್ಲಿ ಕೂಡಾ ಮೂರು ವಿಕೆಟ್ ಪಡೆಯುವ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸ್ವಿಕರಿಸಿದ್ದಾರೆ.
ಆರ್‌ಸಿಬಿ ಪರ ಆಡಿದ 19 ಪಂದ್ಯಗಳಿಂದ ಮೊಯೀನ್ ಅಲಿ 309 ರನ್ ಹಾಗೂ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಆರ್‌ಸಿಬಿ ತಂಡದಲ್ಲಿ ಸಿಕ್ಕ ನಿಗದಿತ ಅವಕಾಶಗಳಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ತೋರಿದ್ದರು. ಆದರೂ, ಬೆಂಗಳೂರು ಫ್ರಾಂಚೈಸಿ ಮೊಯೀನ್ ಅಲಿಯ ಕೈ ಬಿಟ್ಟಿತ್ತು .ಈ ವರ್ಷ ಮೊಯೀನ್ ಅಲಿ ಉತ್ತಮ ಪ್ರದರ್ಶನ ನಿಡುತ್ತಿದ್ದು, ಆರ್‌ಸಿಬಿಗೆ ಖಂಡಿತಾ ಬೇಸರವಾಗಬಹುದು ಎಂದು ನೆಟ್ಟಿಗರು ಆರ್ ಸಿ ಬಿ ಕಾಲು ಎಳೆದಿದ್ದಾರೆ.
ಮೊಯೀನ್ ಅಲಿ ಅನ್ನು 7 ಕೋಟಿ ರೂ. ಗಳಿಗೆ ಖರೀದಿಸಿದ ಚೆನ್ನೈ ನಿರ್ಧಾರವನ್ನು ಅಭಿಮಾನಿಗಳು ಸ್ವಾಗತಿಸಿದರು. ಅದರಂತೆ ಅಲಿ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದರೆ, ಬೌಲಿಂಗ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂದೆ ಇಟ್ಟುಕೊಂಡು ನೆಟ್ಟಿಗರು ಆರ್ ಸಿ ಬಿ ಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.