ಕೋವಿಡ್-19: ಮಹಾರಾಷ್ಟ್ರ- ಗೋವಾ ಗಡಿ ಬೀಗಿಗೊಳಿಸಲು ಕ್ರಮ: ಸಚಿವ ಉಮೇಶ್ ಕತ್ತಿ

ಕೋವಿಡ್-19: ಮಹಾರಾಷ್ಟ್ರ- ಗೋವಾ ಗಡಿ ಬೀಗಿಗೊಳಿಸಲು ಕ್ರಮ: ಸಚಿವ ಉಮೇಶ್ ಕತ್ತಿ.
ಬೆಳಗಾವಿ: ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ಚೆಕ್ ಪೋಸ್ಟ್ ಬೀಗಿಗೊಳಿಸಿ, ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಗಡಿಯಲ್ಲಿ ಬಂದು ಹೋಗುವ ಜನರ ಮಾಹಿತಿ ಪಡೆಯಬೇಕು. ಬೆಳಗಾವಿ ಜಿಲ್ಲೆಯ ಬಾರ್ಡರ್ ಗಳನ್ನು ಬೀಗಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಇಲಾಖೆಯ ಸಚಿವ ಉಮೇಶ ಕತ್ತಿ ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಸಚಿವ ಉಮೇಶ ಕತ್ತಿ ಅವರು, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಗಡಿಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ. ನಿತ್ಯ 15 ಸಾವಿರ ಜನರಿಗೆ ವಾಕ್ಸಿನ್ ನೀಡಬೇಕು. ಜೊತೆಗೆ ಜಿಲ್ಲೆಯಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ತಾಲೂಕಿನಲ್ಲಿ ಕೋವಿಡ್ ಕೇರೆ ಸೆಂಟರ್ ಆರಂಭಿಸಬೇಕು. ಈ ಗಾಗೆಲೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಜಾತ್ರೆ, ಉತ್ಸವ ಸಂಪೂರ್ಣ ಬಂದ್ ಮಾಡಲು ಸೂಚನೆ ನೀಡಿದ್ದಾರೆ.
ನಗರದಲ್ಲಿ ಇರುವ ತರಕಾರಿ ಮಾರುಕಟ್ಟೆಯನ್ನು ವಿಭಜನೆ ಮಾಡಬೇಕು. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಜನಜಂಗುಳಿ ಸೇರುತ್ತಿದ್ದು, ನಿಯಂತ್ರಣ ಮಾಡಬೇಕು ಎಂದು ಸಭೆಯಲ್ಲಿ ಅಧಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಅವರು ಸೂಚನೆ ನೀಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಕೋವಿಡ್ ನಿಂದಾಗಿ ಜಿಲ್ಲೆಯಲ್ಲಿ ತೊಂದರೆ ಆಗಬಾರದು. ಕೊರೊನಾದಿಂದ ಜನರ ಸಾವು ನೋವು ಆಗಬಾರದು. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. ಕೋವಿಡ್ ವಿಚಾರದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ತಿಳಿಸಿದರು.