ಗಡಿ ಜಿಲ್ಲೆ ಬೆಳಗಾವಿಯಲ್ಲೂ ಕೋವಿಡ್ ನಿಯಮ ಮುಲಾಜಿಲ್ಲದೇ ಜಾರಿಗೆ ಡಿಸಿ ಡಾ.ಹರೀಶ್ ಕುಮಾರ್ ಸೂಚನೆ

ಕೋವಿಡ್ ಪ್ರಕರಣಗಳು ಹೆಚ್ಚಳವಾದರೆ ಪ್ರಮುಖ ಅಧಿಕಾರಿಗಳೆ ನೆರ ಹೊಣೆ:
ಬೆಳಗಾವಿ: ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಡಿಸಿ ಡಾ.ಕೆ.ಹರೀಶ್‌ಕುಮಾರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕೆ ಹರೀಶ್ ಕುಮಾರ್ ಅವರು ತಮ್ಮ ಬೆಳಗಾವಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಕೋವಿಡ್ ಮಾರ್ಗಸೂಚಿಗಳನ್ನು ಯಾವುದೇ ಮುಲಾಜು ಇಲ್ಲದೇ ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಾತ್ರೆಯಾಗಲಿ, ಮದುವೆಗಳಾಗಲಿ ಯಾವುದೇ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳ ಮಾರ್ಗಸೂಚಿಗಳು ಸರಿಯಾದ ಕ್ರಮದಲ್ಲಿ ಪಾಲನೆಯಾಗುತ್ತಿದೇಯಾ ಅಥವಾ ಉಲ್ಲಂಘಿಸಿ, ಜನರು ಬೇಕಾಬಿಟ್ಟಿಯಾಗಿ ಸೇರಿದ್ದು ಕಂಡು ಬಂದ್ರೆ ಅದಕ್ಕೆ ಆಯಾ ಪ್ರದೇಶದ ಅಧಿಕಾರಿಗಳೆ ನೀವೆ ಹೊಣೆಯಾಗುತ್ತಿರಿ ಎಂದು ಆಯಾ ತಾಲೂಕಿನ ತಹಶಿಲ್ದಾರ್‌ಗಳಿಗೆ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು ಸೇರಿದಂತೆ 14 ತಾಲೂಕುಗಳ ತಹಶಿಲ್ದಾರ್‌ಗಳ ಜತೆ ಸಭೆ ಮಾಡಿದ ಜಿಲ್ಲಾಧಿಕಾರಿಗಳು ಕೋವಿಡ್ ಸ್ಥಿತಿ ಬಗ್ಗೆ ತಿಳಿದುಕೊಂಡರು.
ಸಭೆಯಲ್ಲಿ ಎಡಿಸಿ ಯೋಗೇಶ್ವರ್, ಡಿಹೆಚ್‌ಒ ಡಾ.ಎಸ್. ವಿ. ಮುನ್ಯಾಳ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್.ತುಕ್ಕಾರ್, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್.ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ್ ಡುಮ್ಮಗೋಳ್ ಸೇರಿ ಹಲವರು ಉಪಸ್ಥಿತಿರಿದ್ದರು.