ಕರ್ನಾಟಕ

ಸಿಎಂ ಪಾಸಿಟಿವ್; ಬಾಲಚಂದ್ರ ಜಾರಕಿಹೊಳಿ‌ ಹೋಮ್ ಕ್ವಾರಂಟೈನ್

“ಹೋಮ್ ಕ್ವಾರಂಟೈನ್ ಗೆ” ಒಳಗಾದ ಬಾಲಚಂದ್ರ ಜಾರಕಿಹೊಳಿ.

ಬೆಳಗಾವಿ: ಚುನಾವಣಾ ಪ್ರಚಾರಕ್ಕಾಗಿ ಮೂಡಲಗಿಗೆ ಏ-14ರಂದು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋರೋನಾ ಸೋಂಕು ದೃಢ ಪಟ್ಟಿದೆ. ಆ ಸಂದರ್ಭದಲ್ಲಿ ಅವರೊಂದಿಗೆ ಇಡೀ ದಿನ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ. ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಐದು ದಿನಗಳವರೆಗೆ ಹೋಮ್ ಕ್ವಾರಂಟೈನ್ ನಲ್ಲಿ ಇರುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.‌

ಈ ಕುರಿತು ಮಾಹಿತಿ ನೀಡಿರುವ ಅವರು, ಮುಖ್ಯಮಂತ್ರಿಗಳು ಸಹ ತಮ್ಮೊಂದಿಗೆ ಪ್ರಾಥಮಿಕ ಹಂತದಲ್ಲಿ ಯಾರೂ ಸಂಪರ್ಕವಿರುತ್ತಾರೋ ಅವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನನಗೆ ಯಾವುದೇ ತರಹ ರೋಗ ಲಕ್ಷಣಗಳಿಲ್ಲದಿದ್ದರೂ, ಸಿಎಂ ಹಾಗೂ ವೈದ್ಯರ ಸಲಹೆ ಮೇರೆಗೆ ಏ-18 ರಿಂದ 5 ದಿನಗಳವರೆಗೆ ಹೋಮ್ ಕ್ವಾರಂಟೈನ್‍ಗೆ ಒಳಗಾಗಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ನಾಳೆಯಿಂದಲೇ ಕ್ಷೇತ್ರದ ಕಾರ್ಯಕರ್ತರ ಬಂಧುಗಳನ್ನು ಭೇಟಿ ಮಾಡಬೇಕೆಂಬುವುದು ನನ್ನ ಆಶಯವಾಗಿತ್ತು.ಅನಿವಾರ್ಯದಿಂದ ಹೋಮ್ ಕ್ವಾರಂಟೈನ್‍ಗೆ ಒಳಗಾಗುತ್ತಿರುವುದರಿಂದ ಯಾರೂ ತಪ್ಪು ತಿಳಿದುಕೊಳ್ಳಬಾರದು. ನನ್ನ ಅನುಪಸ್ಥಿತಿಯಲ್ಲಿ ನಮ್ಮ ಟೀಂ ಎನ್‍ಎಸ್‍ಎಫ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ.‌ ಬರುವ ಶುಕ್ರವಾರದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು-ಕೊರತೆಗಳನ್ನು ವಿಚಾರಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

  • ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ

ಶನಿವಾರದಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಾ ಸುರೇಶ ಅಂಗಡಿ ಅವರ ಪರ ಕ್ಷೇತ್ರಾದಾಧ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಅರಬಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!