ಬಡವರ ಮನೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುತ್ತಿರುವ ದಕ್ಷ ಅಧಿಕಾರಿ ಬೆಳಗಾವಿ ಎಸಿ ಅಶೋಕ ತೇಲಿ

ಬೆಳಗಾವಿ: ಕಾಯಕವೇ ಕೈಲಾಸ ಅಂತಾ ನಂಬಿರುವ ದಕ್ಷ, ಪ್ರಮಾಣಿಕ ಅಧಿಕಾರಿ ಇವರು..ಬಡತನದಲ್ಲಿ ಬೆಂದು ಇಂದು ಉನ್ನತ ಹುದ್ದೆ ಗಿಟ್ಟಿಸಿಕೊಂಡ ಆಫೀಸರ್. ಇವರು ಗಡಿ ಜಿಲ್ಲೆಯಲ್ಲಿ ಬೆಳಗಾವಿಯಲ್ಲಿ ಬಡ ಮಕ್ಕಳ ಉಜ್ವಲವಾದ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಹೃದಯವಂತ. ಯಸ್ ಅವರ ಹೆಸರು ತೇಲಿ. ಬೆಳಗಾವಿ ಉಪ ವಿಭಾಗ ಅಧಿಕಾರಿ, ಅಂದ್ರೆ ಬೆಳಗಾವಿ ಎಸಿ ಅಶೋಕ ತೇಲಿ.
ಬಡತನ, ಕಷ್ಟವನ್ನ ಹತ್ತಿರದಿಂದ ಬಲ್ಲವರು ಇವರು. ಕಷ್ಟ ಪಟ್ಟು ಓದಿ ಕೆಎಎಸ ಅಧಿಕಾರಿ ಆಗಿರುವ ಅಶೋಕ ತೇಲಿ ಇವತ್ತು ತಮ್ಮನ್ನು ತಾವು ಬಡವರ ಮನೆಯಲ್ಲಿ ಅಕ್ಷರದ ದೀಪ ಬೆಳಗಿಸುವ ಕಾರ್ಯವನ್ನ ಸದ್ದಿಲ್ಲದೆ ಮಾಡುತ್ತಿದ್ದಾರೆ.
ಅಶೋಕ ತೇಲಿ ಬೆಳಗಾವಿ ಎಸಿ ಆಗಿರುವುದರಿಂದ ಅವರ ವ್ಯಾಪ್ತಿಗೆ ಬೆಳಗಾವಿ, ಖಾನಾಪುರ, ಹುಕ್ಕೇರಿ ಹೀಗೆ ಮೂರು ತಾಲೂಕುಗಳು ಬರುತ್ತವೆ. ಈ ಮೂರು ತಾಲೂಕಿನ ಕರ್ತವ್ಯದ ಜವಾಬ್ದಾರಿಯನ್ನ ಅಚ್ಚು ಕಟ್ಟಾಗಿ ನಿಭಾಯಿಸುತ್ತಿರುವ ಅವರು. ಸದ್ದಿಲ್ಲದೆ ಇನ್ನೊಂದು ಮಹತ್ವದ ಕಾರ್ಯವನ್ನ ಮಾಡುತ್ತಿದ್ದಾರೆ. ಅದುವೇ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಶಾಲೆಗೆ ಹೋಗದೇ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನ ಪತ್ತೆ ಹಚ್ಚಿ, ಅವರ ಪೋಷಕರಿಗೆ ಶಿಕ್ಷಣದ ಮಹತ್ವವನ್ನ ಅರಿವು ಮೂಡಿಸಿ ಶಾಲೆಗೆ ಸೇರಿಸುವ ಕಾರ್ಯವನ್ನ ಮಾಡುತ್ತಿದ್ದಾರೆ.
ಅದರಲ್ಲೂ ಬೆಳಗಾವಿ, ಖಾನಾಪುರ ಹಾಗೂ ಹುಕ್ಕೇರಿ ತಾಲೂಕಿನ ನದಿ ದಡದಲ್ಲಿ ಇಟ್ಟಂಗಿ ನಿರ್ಮಿಸುವ ಕಾರ್ಯ ನಡೆಯುತ್ತದೆ. ಆದ್ರೆ ಇಲ್ಲಿ ತಂದೆ ತಾಯಿ ಜೊತೆಗೆ ಮಕ್ಕಳು ಕೆಲಸ ಮಾಡುವುದನ್ನ ಗಮನಿಸಿದ ಎಸಿ ಅಶೋಕ ತೇಲಿ ನಿರಂತರವಾಗಿ ಅನಿರೀಕ್ಷಿತ ದಾಳಿಗಳನ್ನ ನಡೆಸುತ್ತಿದ್ದಾರೆ. ಜೊತೆಗೆ ಕೆಲಸಕ್ಕೆ ಹಚ್ಚಿದ ಮಾಲೀಕರು, ಪೋಷಕರಿಗೆ ಬಿಸಿ ಮುಟ್ಟಿಸುತ್ತಾರೆ. ಇದರೊಂದಿಗೆ ತಮ್ಮ ಅಧಿನ ಅಧಿಕಾರಿಗಳ ಮೂಲಕ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನ ದಾಖಲಾತಿ ಮಾಡಿಸುತ್ತಾರೆ. ಹೀಗೆ ಹಲಗು ರಾತ್ರಿ ಎನ್ನದೇ ಬೆಳಗಾವಿ ಎಸಿ ಅಶೋಕ ತೇಲಿ ಅವರು ಬಡ ಮಕ್ಕಳ ಶಿಕ್ಷಣ ಕ್ಕೆ ಶ್ರಮಿಸುತ್ತಿದ್ದಾರೆ. ಬಡವರಿಗೆ ಸರ್ಕಾರಿ ಯೋಜನೆಗಳ ಜೊತೆಗೆ ಉಚಿತ ಶಿಕ್ಷಣ ಕೊಡಿಸುವ ಕಾರ್ಯವನ್ನ ಅಶೋಕ ತೇಲಿ ಮಾಡುತ್ತಿದ್ದಾರೆ. ಸದ್ದಿಲ್ಲದೆ ದಕ್ಷ ಅಧಿಕಾರಿ ಅಶೋಕ ತೇಲಿ ಅವರು ಕರ್ತವ್ಯ ಪ್ರಜ್ಞೆ ಜೊತೆಗೆ ಸಾಮಾಜಿಕ ಜವಾಬ್ದಾರಿ, ಕಳಕಳಿಯನ್ನ ಮೈಗೂಡಿಸಿಕೊಂಡು ಜನರ ಸೇವೆ ಸಲ್ಲಿಸಿದ್ದಾರೆ. ಇಂತಹ ದಕ್ಷ ಅಧಿಕಾರಿ ಬೆಳಗಾವಿ ಜಿಲ್ಲೆಗೆ ಸಿಕ್ಕಿರುವುದು ಪುಣ್ಯವೇ ಸರಿ.