ಮಹಾರಾಷ್ಟ್ರ ಗಡಿ ಕನ್ನಡಿಗರ ಹಿತಕ್ಕೆ ಬದ್ಧ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ


ಶ್ರೀನಿವಾಸ ಪಟ್ಟಣ
ಬೆಳಗಾವಿ: ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕುನಿಂದ ಜನಸಾಮಾನ್ಯರು ಜಾಗೃತರಾಗಿರಬೇಕು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ, ಕೇರಳದಲ್ಲಿ ಹೊಸ ಪ್ರಬೇಧದ ಸೋಂಕು ಪತ್ತೆಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಗಡಿ ಭಾಗದಲ್ಲಿ ಕಾಳಜಿ ವಹಿಸಲು ಸೂಚನೆ ನೀಡಿದೆ. ಸಾರ್ವಜನಿಕರು
ಮಾಸ್ಕ್, ಸಾಮಾಜಿಕ ಅಂತರ ಕಾಪಾಡಬೇಕು. ಅಂತರ ರಾಜ್ಯ ಸಾರಿಗೆ ವ್ಯವಸ್ಥೆ ಆರಂಭವಾಗಿದೆ.
ಸಂಪುಟದಲ್ಲಿ ಪಂಚಮಸಾಲಿ ಮೀಸಲಾತಿಗೆ ವಿರೋಧ ವದಂತಿ ಸಂಪೂರ್ಣ ಸುಳ್ಳು ಸುದ್ದಿ. ಈ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ತಪ್ಪು ಕಲ್ಪನೆ ನೀಡಲಾಗಿದೆ.
ಸಂಪುಟದಲ್ಲಿ ಈ ಬಗ್ಗೆ ಯಾವುದೇ ವಾದ, ವಿವಾದ ಆಗಿಲ್ಲ. ಬೆಳಗಾವಿ ಸುವರ್ಣ ಸೌಧದ ಉಪವಾಸ ಸಂದರ್ಭದಲ್ಲಿ ಬೆಂಬಲ ನೀಡಿದೆ. ಹೊರಗಿನವರು ಯಾರೋ ವದಂತಿ ಹಬ್ಬಿಸಿದ್ದಾರೆ.
ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರ ಸರ್ವೇ ವಿಚಾರ.
ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ.
ಜತ್ತ ಭಾಗದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜನ ಇದ್ದಾರೆ.
ಸರ್ವೇ ಮಾಡಿಕೊಂಡು ಎನ್ ಮಾಡ್ತಾರೆ ಮಾಡಿಕೊಳ್ಳಲಿ.
ಕನ್ನಡಿಗರ ತೊಂದರೆ ಕೊಡೊ ಕೆಲಸ ಮಾಡಿದಾಗ ನಾವು ಯೋಚನೆ ಮಾಡ್ತಿವಿ.
ಹೊರ ನಾಡ ಕನ್ನಡಿಗರ ಜತೆಗೆ ಸದಾ ಸರ್ಕಾರ ಇದೆ ಎಂದು ಹೇಳಿದರು.