ಪಾಸಪೋರ್ಟ್, ಏರ್ಲೈನ್ಸ್ ಟಿಕೆಟ್ ಕೊಟ್ಟು ಮದುವೆಗೆ ಆಮಂತ್ರಣ


ಮಹಾಂತೇಶ ಇರಳಿ
ಬೆಳಗಾವಿ: ಕುಂದಾನಗರಿ ಬೆಳಗಾವಿಯ ನವ ಜೋಡಿ ಈಗ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮದುವೆ ಗೆ ಸಂಬಂಧಿಕರು, ಸ್ನೇಹಿತರು, ಬಂಧುಗಳಿಗೆ ವಿಶೇಷವಾಗಿ ಆಮಂತ್ರಣ ನೀಡುತ್ತಿದ್ದಾರೆ. ಹಾಗೇ ನೋಡಿದ್ರೆ ಮದುವೆ ಗೆ ಅಕ್ಷತೆ, ಮದುವೆ ಪತ್ರಿಕೆ ನೀಡಿ ಆಮಂತ್ರಣ ನೀಡುವುದು ಸಾಮಾನ್ಯ. ಆದ್ರೆ ಕುಂದಾನಗರಿ ಈ ಜೋಡಿ ಸಿಂಪಲ್ ಆದ್ರು ಸ್ಪೆಷಲ್ ಆಗಿಯೇ ಆಹ್ವಾನಿಸುತ್ತಿದ್ದಾರೆ.

ವಿಮಾನಯಾನದ ಪಾಸ್ ಪೋರ್ಟ್, ಏರ್ಲೈನ್ಸ್ ಟಿಕೆಟ್ ಮಾದರಿಯ ವೆಡ್ಡಿಂಗ್ ಕಾರ್ಡ್ ನೀಡಿ ಮದುವೆಗೆ ಆಮಂತ್ರಿಸುತ್ತಿದ್ದಾರೆ
ಬೆಳಗಾವಿಯ ಅನಗೋಳದ ನಿವಾಸಿ ಧರ್ಮರಾಜ್ ಪಾಟೀಲ್ ಮತ್ತು ರಚಿತಾ ಮದುವೆ ಫೆ.28.ರಂದು ನಿಶ್ಚಯವಾಗಿದ್ದು, ಮದುವೆ ಆಮಂತ್ರಣ ಈಗ ಎಲ್ಲರನ್ನ ಆಕರ್ಷಿಸುತ್ತಿದೆ.

ಈವರೆಗೂ ನಾವು ಆಧಾರ ಕಾರ್ಡ್, 2000 ನೋಟ್, ಪಡಿತರ ಚೀಟಿಯ ಮಾದರಿಯ ಆಮಂತ್ರಣ ಪತ್ರಿಕೆ ಮುದ್ರಣ ನೋಡಿದ್ವಿ. ಈಗ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೆಡ್ಡಿಂಗ್ ಪಾಸ್ ಪೋರ್ಟ್ ಮಾದರಿಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಣವಾಗಿದ್ದು, ನವ ಜೋಡಿ ವಿನೂತನವಾಗಿ ಆಮಂತ್ರ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ
ಸೀಟ್- ವಿಐಪಿ, ಪ್ಯಾಸೆಂಜರ್ ನೇಮ್…. ಬೋರ್ಡಿಂಗ್ ಟೈಮ್, ಡೆಸ್ಟಿನೇಷನ್, ಲೋಕೆಷನ್, ವೆಡ್ಡಿಂಗ್ ಪಾಸ್ ಪೋರ್ಟ್ ಅಂತಾ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದೆ.
ಬೋರ್ಡಿಂಗ್ ಪಾಸ್, wedding airline ಮುಖಾಂತರ ಮದುವೆ ಆಮಂತ್ರಣವಿದ್ದು.. ಪಾಸ್ ಪೋರ್ಟ್ to ಮ್ಯಾರೇಜ್ ಕಾರ್ಡ್ ಈಗ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನ ಆಕರ್ಷಿಸುತ್ತಿದೆ.



