ಕ್ರೈಂ
1947 ಬಳಿಕ ಮೊದಲ ಮಹಿಳೆ ಗಲ್ಲು ಶಿಕ್ಷೆ


ಮಹಿಳಾ ಕೈದಿ ಗಲ್ಲಿಗೆ
ಲಖನೌ: ಮೊದಲ ಬಾರಿಗೆ ಮಹಿಳಾ ಕೈದಿನ್ನು ಗಲ್ಲಿಗೇರಿಸಲು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಕಾರಾಗೃಹದಲ್ಲಿ ಸಿದ್ಧತೆ ನಡೆಸಲಾಗಿದೆ.
ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಇಂತಹದೊಂದು ಶಿಕ್ಷೆ ನೀಡಲಾಗಿದೆ. 2008ರಲ್ಲಿ ಪ್ರಿಯಕರನ ಜೊತೆ ಸೇರಿ ತನ್ನ ಕುಟುಂಬದ ಏಳು ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ ಕುಟುಂಬದ ಪ್ರಕರಣದಲ್ಲಿ ಅಮೋಹ್ರಾ ಜಿಲ್ಲೆ ಮೂಲದ ಶಬ್ನಂಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ. ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲಾದ್ ಅವರು ಮಥುರಾ ಜೈಲಿಗೆ ಎರಡು ತಿಂಗಳಲ್ಲಿ ಎರಡು ಬಾರಿ ಭೇಟಿ ನೀಡಿದ್ದಾರೆ. ಗಲ್ಲಿಗೇರಿಸಲು ಹಗ್ಗವನ್ನು ಖರೀದಿಸಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.