ಗಂಡ ಹೆಂಡ್ತಿ ಪ್ರೀಯಕರ ಮಧ್ಯೆ ಪೊಲೀಸರ ಪಂಚಾಯ್ತಿ


ಪೊಲೀಸರ ವಿಚಿತ್ರ ಖಾಜಿ ಪಂಚಾಯಿತಿ
ರಾಂಚಿ: ಜಾರ್ಖಂಡ್ ರಾಜ್ಯದ ಪೊಲೀಸರು ಗಂಡ, ಹೆಂಡತಿ ಮತ್ತು ಪ್ರೇಯಸಿ ನಡುವೆ ಸೃಷ್ಟಿಯಾದ ಕೌಟುಂಬಿಕ ಕಲಹ ಬಗೆಹರಿಸಲು ಹೋಗಿ ವಿಚಿತ್ರವಾದ ಖಾಜಿ ನ್ಯಾಯ ಮಾಡಿ ಚಚೆ೯ಗೊಳಗಾಗಿದ್ದಾರೆ.
ರಾಂಚಿಯ ರಾಜೇಶ್ ಮಹತೋ ತನಗೆ ಹೆಂಡತಿ ಮತ್ತು ಒಂದು ಮಗುವಿರುವುದನ್ನ ಮುಚ್ಚಿಟ್ಟು, ತಾನು ಸಿಂಗಲ್ ಎಂದು ಸುಳ್ಳು ಹೇಳಿ ಯುವತಿಯೊಬ್ಬಳನ್ನು ಪ್ರೀತಿಸಿ ಅವಳೊಂದಿಗೆ ಓಡಿ ಹೋಗಿದ್ದ. ಇದನ್ನು ತಿಳಿದ ಹೆಂಡತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದಲ್ಲದೇ ಪ್ರೇಯಸಿ ಮನೆಯವರು ತಮ್ಮ ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ್ದರು. ಇಬ್ಬರ ದೂರು ಪಡೆದು ರಾಜೇಶ್ ನನ್ನು ಹಿಡಿದು ತಂದ ಪೊಲೀಸ್ ರಾಜಿ ಮಾಡಲು ಮುಂದಾದರು.
ಅದಾಗಲೇ ಯುವತಿಯೊಂದಿಗೆ ರಾಜೇಶ್ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದ. ಇದನ್ನು ತಿಳಿದು ಕುಟುಂಬಸ್ಥರು ಜಗಳ ಆಡಲಾರಂಭಿಸಿದಾಗ, ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜೇಶ್ ಗೆ ವಾರದ ಏಳು ದಿನದಲ್ಲಿ ಮೊದಲ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ನಂತರದ ಮೂರು ದಿನ ಎರಡನೇ ಹೆಂಡತಿಯೊಂದಿಗೆ ಇರುವಂತೆ ಸೂಚಿಸಿದರು. ಉಳಿಸಿದೊಂದು ದಿನ ರಜೆಯಂತೆ ಪರಿಗಣಿಸಲು ಹೇಳಿದರು.
ಪೊಲೀಸರ ಈ ಖಾಜಿ ನ್ಯಾಯಕ್ಕೆ ಎರಡು ಕುಟುಂಬದವರು ಒಪ್ಪಿ ಪತ್ರಕ್ಕೆ ಸಹಿಹಾಕಿದ್ದಾರೆ.