ಸೈಲೆಂಟ್ ಆಗಿಯೇ ಮೋಸ್ಟ್ ವೆಲಕಮ್ ಅಂದ್ರು ಸಚಿವ ರಮೇಶ್ ಜಾರಕಿಹೊಳಿ


ಶ್ರೀನಿವಾಸ ಪಟ್ಟಣ
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮುಂದಿನ ನನ್ನ ಟಾರ್ಗೆಟ್ ಗೋಕಾಕ, ಪಕ್ಷ ಬಯಸಿದ್ರೇ ಗೋಕಾಕನಿಂದ ಸ್ಪರ್ಧಿಸುವೆ ಎಂದು ಹೇಳಿದ್ದೇ ತಡ, ಅದಕ್ಕೆ ಗೋಕಾಕ ಸಾಹುಕಾರ್, ಸಚಿವ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಮೋಸ್ಟ್ ವೆಲಕಮ್ ಎಂದು ಹೇಳಿದ್ದಾರೆ. ಶಾಸಕಿ ಲಕ್ಷ್ಮೀ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ಜಿದ್ದಾಜಿದ್ದಿನ ರಾಜಕೀಯ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮುಖಂಡ ರನ್ನ ,ಚುನಾಯಿತ ಪ್ರತಿನಿಧಿಗಳನ್ನ ತನ್ನತ್ತ ಸೆಳೆಯತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ತಕ್ಷಣವೇ ರಮೇಶ್ ಜಾರಕಿಹೊಳಿ ಗ್ರಾಮೀಣ ಮತಕ್ಷೇತ್ರದಲ್ಲಿ ಆಕ್ಟಿವ್ ಆದ್ರು. ಆದ್ರೆ ಇಷ್ಟು ದಿನ ಸಾಹುಕಾರ್ ರಾಜಕೀಯ ದಾಳಗಳನ್ನ ಗಮನಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮೈಕೊಡವಿ ಗೋಕಾಕ ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ಇದನ್ನ ಸೈಲೆಂಟ್ ಆಗಿಯೇ ಸಚಿವ ರಮೇಶ್ ಜಾರಕಿಹೊಳಿ ತೀರುಗೇಟು ನೀಡಿದ್ದು, ಮೋಸ್ಟ್ ವೆಲ್ ಕಮ್ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು. ಯಾಕೆ ಸರ್ಕಾರ ಪತನ ಆಗಿದೆ ಎನ್ನುವುದು ಅವರ ಗಾಡ್ ಫಾದರ್ ಗೆ ಕೇಳಿದ್ರೆ ಒಳ್ಳೆಯದು ಎಂದು ಲಕ್ಷ್ಮೀ ಹೆಬ್ಬಾಳಕರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಚಿವ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಬ್ಬರು ನಾಯಕರ ಮಧ್ಯೆ ಮತ್ತಷ್ಟು ಟಾಕ್ ವಾರಗೆ ಕಾರಣವಾಗಲಿದೆ.