ಗೋಕಾಕ ಅಸ್ತ್ರ ಪ್ರಯೋಗಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ


ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನ ಟಾರ್ಗೆಟ್ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗೋಕಾಕ ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ದೋಸ್ತಿ ಸರ್ಕಾರ ಪತನದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಯ್ತು. ಬಿಜೆಪಿ ಸರ್ಕಾರ ರಚನೆ ಮಾಡಿದ ಬಳಿಕ ಸಚಿ ರಮೇಶ್ ಜಾರಕಿಹೊಳಿ ಡೇ ಒಂದರಿಂದಲೂ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ರಾಜಕೀಯ ದಾಳಗಳನ್ನ ಉರಿಸುತ್ತಾ ಬಂದ್ರು. ಯಾವಾಗ ಗ್ರಾಪಂ ಚುನಾವಣೆ ಫಲಿತಾಂಶ ಬಂದು, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತೋ, ಆ ಕ್ಷಣದಿಂದ ಮತ್ತೆ ಬೂದಿಮುಚ್ಚಿದ ಕೆಂಡದಂತೆ ಇದ್ದ ವಾರ ಈಗ ತಾರಕಕ್ಕೆ ಏರಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ಪದೇ ಪದೇ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ದಲ್ಲಿ ಬಿಜೆಪಿ ಜೇಂಡಾ ಹಾರಿಸುವತನಕ ವಿರಮಿಸುವುದಿಲ್ಲ ಶಪತ ಮಾಡಿದ್ದರು. ಆದ್ರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತ್ರ ಇದಕ್ಕೆ ಯಾವುದೇ ಉತ್ತರ ನೀಡದೇ ಮೌನವಾಗಿದ್ದರು. ಈಗ ಕಾಂಗ್ರೆಸ್ ವಕ್ತಾರೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಓಪನ್ ಆಗಿ ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ದಾಳವನ್ನ ಉರಳಿಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತನ್ನ ರಾಜಕೀಯ ಬದ್ಧ ವೈರಿ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಟಾರ್ಗೆಟ್ ವಿಚಾರಕ್ಕೆ ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ. ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬಿಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂ ಎಲ್ ಎ ಗಳನ್ನೆ ಎಸ್ಕೆಪ್ ಮಾಡಿದ್ದಾರೆ ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕಾಲಾಯ ತಸ್ಮೈ ನಮಃ. ಎಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಗೋಕಾಕ್ ನಲ್ಲಿ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.