ಬಿಜೆಪಿ ಹೈಕಮಾಂಡ ಗಮನ ಸೆಳೆದ ಡಾ.ಸೋನಾಲಿ ಸರ್ನೋಬತ್


ಬೆಳಗಾವಿ: ಬೆಳಗಾವಿ ಲೋಕಸಭೆಯಲ್ಲಿ ಹೊಸ ಭರವಸೆ ನಾಯಕಿ ಉದಯವಾಗಿದ್ದಾರೆ. ಬಿಜೆಪಿ ನಾಯಕಿ, ಲಲಿತ ಕಲಾ ಅಕಾಡೆಮಿ ಸದಸ್ಯ ಡಾ. ಸೋನಾಲಿ ಸರ್ನೋಬತ್ ಈಗ ರಾಜ್ಯವಲ್ಲ ದೆಹಲಿಯ ಹೈಕಮಾಂಡ ಗಮನವನ್ನ ಸೆಳೆದಿದ್ದಾರೆ. ಡಾ. ಸೋನಾಲಿ ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿ ರಾಜಕೀಯ ಪ್ರವೇಶ ಪಡೆದುಕೊಂಡಿದ್ದರೂ, ತಮ್ಮ ಸಮಾಜಮುಖಿ ಕಾರ್ಯ ಮತ್ತು ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಆಕ್ಟಿವ್ ಆಗಿವ ಮೂಲಕ ಈಗ ಡಾ. ಸೋನಾಲಿ ಸರ್ನೋಬತ್ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

ಹಾಗೇ ನೋಡಿದ್ರೆ ಸೋನಾಲಿ ಅವರ ವೈದ್ಯಕೀಯ ವೃತ್ತಿಯ ಹಿನ್ನೆಲೆಯಿಂದ ಬಂದವರು. ಆದ್ರೆ ಬಡ ವಿದ್ಯಾರ್ಥಿಗಳಿಗಾಗಿ ಏನಾದ್ರು ಮಾಡಬೇಕೆಂದು ಡಾ. ಸೋನಾಲಿ ಸರ್ನೋಬತ್ ಅವರ ನಿಯತ್ ಫೌಂಡೇಶನ ಆರಂಭಿಸುತ್ತಾರೆ. ಈ ಮೂಲಕ ಬೆಳಗಾವಿ ನಗರ ಮತ್ತು ತಾಲೂಕಿನ ನೂರಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಸಹಾಯವನ್ನ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳ ಶಾಲಾ-ಕಾಲೇಜು ಫೀಜ್ ಹಾಗೂ ಅವರಿಗೆ ಬೇಕಾಗ ಅಗತ್ಯ ಕಲಿಕಾ ಸಾಮಗ್ರಿಗಳನ್ನ ನೀಡುವ ಕಾರ್ಯವನ್ನ ಸೋನಾಲಿ ಸರ್ನೋಬತ್ ಮಾಡುತ್ತಲೇ ಇದ್ದಾರೆ.
ಇದರೊಂದಿಗೆ ಬಿಜೆಪಿಯಲ್ಲೂ ಸಹ ಸಕ್ರಿಯವಾಗಿರುವ ಡಾ.ಸೋನಾಲಿ ಸರ್ನೋಬತ್ ಅವರು ಕೊರೊನಾ ಲಾಕಡೌನ ಸಂದರ್ಭದಲ್ಲಿ ತುಂಬಾ ಗಮನೆ ಸೆಳೆಯುವಂತಹ ಕಾರ್ಯವನ್ನ ಮಾಡಿದ್ದಾರೆ. ಕೊರೊನಾ ವಾರಿಯರ್ಸಗಳ ಬಗ್ಗೆ ಕಾಳಜಿ ತೋರಿಸಿದ್ದಾರೆ. ಅನೇಕ ಹೆಲ್ತ್ ಕ್ಯಾಂಪಗಳನ್ನ ಮಾಡುವ ಮೂಲಕ ಪಕ್ಷದ ವರಿಷ್ಠರ ಗಮನವನ್ನ ಸೆಳೆದಿದ್ದಾರೆ. ಹೀಗಾಗಿ ಡಾ. ಸೋನಾಲಿ ಸರ್ನೋಬತ್ ಸದ್ದಿಲ್ಲದೇ ಈಗ ಭಾರತೀಯ ಜನತಾ ಪಾರ್ಟಿಯಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಇನ್ನು ಹೆಚ್ಚಿನ ಜವಾಬ್ದಾರಿಗಳನ್ನ ಪಾರ್ಟಿ ಸಿಗುವ ಸಾಧ್ಯತೆಯಿದೆ. ಈಗಾಗಲೇ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನವನ್ನ ಸೆಳೆಯುವ ಕಾರ್ಯವನ್ನ ಡಾ. ಸೋನಾಲಿ ಸರ್ನೋಬತ್ ಮಾಡಿದ್ದಾರೆ.
