ಇಂದು ಬೆಳಗಾವಿಗೆ ನೂತನ ಸಚಿವ ಉಮೇಶ ಕತ್ತಿ


ಮಹಾಂತೇಶ ಇರಳಿ
ಬೆಳಗಾವಿ: ಇಂದು ಬೆಳಗಾವಿ ನೂತನ ಸಚಿವ ಉಮೇಶ ಕತ್ತಿ ಆಗಮಿಸಲಿದ್ದಾರೆ. ಬಿಜೆಪಿ ಸರ್ಕಾರದ ಹಿರಿಯ ಶಾಸಕ, ಹಿರಿಯ ಸಚಿವ ಉಮೇಶ ಕತ್ತಿ ಅವರು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ವಿಮಾನ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಕ್ಕೆ ಆಗಮಿಸಲಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಉಮೇಶ ಕತ್ತಿ ತವರು ಜಿಲ್ಲೆಗೆ ಆಗಮಿಸುತ್ತಾರೆ. ಉಮೇಶ ಕತ್ತಿ ಜೊತೆಗೆ ಅವರ ಸಹೋದರ ರಮೇಶ್ ಕತ್ತಿ ಹಾಗೂ ಆಪ್ತರು ಆಗಮಿಸುತ್ತಿದ್ದು, ಉಮೇಶ ಕತ್ತಿ ಅವರನ್ನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಅಪಾರ ಅಭಿಮಾನಿಗಳು ಸಹ ಆಗಮಿಸುತ್ತಿದ್ದಾರೆ. ಹುಕ್ಕೇರಿ ಮತಕ್ಷೇತ್ರದಲ್ಲೂ ಉಮೇಶ ಕತ್ತಿ ಅವರನ್ನ ಭವ್ಯವಾಗಿ ಸ್ವಾಗತಿಸಲು ಅಭಿಮಾನಿಗಳು, ಕುಟುಂಬ ಸದಸ್ಯರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿಂದೆ ಉಮೇಶ ಕತ್ತಿ ಅವರು ಜೆ.ಎಚ.ಪಟೇಲ್ ಅವರ ಕಾಲದಿಂದಲೂ ಸಚಿವಾರಗಿ ಕೆಲಸ ಮಾಡಿದ್ದಾರೆ. ಲೋಕೋಪಯೋಗಿ, ಕೃಷಿ, ತೋಟಗಾರಿಗೆ, ಸಕ್ಕರೆ ಹಾಗೂ ಜೈಲು ಖಾತೆಯನ್ನ ನಿಭಾಯಿಸಿದ್ದಾರೆ. ಈಗ ಉಮೇಶ ಕತ್ತಿ ಅವರಿಗೆ ಸಿಎಂ ಯಡಿಯೂರಪ್ಪನವರು ಯಾವ ಖಾತ್ಯೆ ಕೊಟ್ಟರು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ.