ಚಾಲಕ,ಸಿಬ್ಬಂದಿ ಯಡವಟ್ಟು;ಡಿಸಿಎಂ ಲಕ್ಷ್ಮಣ ಸವದಿ ಬಗ್ಗೆ ಅಪಪ್ರಚಾರ ಬೇಡ


ಶ್ರೀನಿವಾಸ ಪಟ್ಟಣ
ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಖಾಸಗಿ ವಾಹನಕ್ಕೆ ಬೆಳಗಾವಿ 3ನೇ ಡಿಪೋದಲ್ಲಿ ಡಿಸೇಜ್ ಹಾಕಿಕೊಂಡ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದ್ರೆ ವಾಹನ ಚಾಲಕ ಮತ್ತು ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಈ ಯಡವಟ್ಟು ನಡೆದಿದೆ. ಸಾರಿಗೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಡಕ್ಕಾಗಿ ಅಧಿಕಾರಿಗಳಾಗಿ ಸೂಚಿಸಿದ್ದಾರೆ.
ಹೌದು…ಶುಕ್ರವಾರ ಬೆಳಗಾವಿಯಲ್ಲಿ ಸಾರಿಗೆ ಇಲಾಖೆ ವಿವಿಧ ಕಾರ್ಯಕ್ರಮಗಳಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪಾಲ್ಗೊಂಡಿದ್ದರು. ಬೆಳಗಾವಿಯ 3ನೇ ಘಟಕದ ಡಿಪೋದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿಗಾಗಿ ನಿರ್ಮಿಸಿರುವ ವಿಶ್ರಾಂತಿ ಗೃಹಗಳ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಅವರ ಆಪ್ತ ಸಹಾಯಕ ಹಾಗೂ ಹಿರಿಯ ಅಧಿಕಾರಿಗಳು ಮಗ್ನವಾಗಿದ್ದರು. ಈ ಸಂದರ್ಭದಲ್ಲಿ 3ನೇ ಘಟಕ ಡಿಪೋದ ಕ್ಲಾರಕ್ ಮತ್ತು ಡಿಸಿಎಂ ಸವದಿ ಖಾಸಗಿ ವಾಹನ ಚಾಲಕ ಇವರಿಬ್ಬರೂ ಸೇರಿ ಡೀಸೇಲ್ ಹಾಕಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಕ್ಕೆ ಸರ್ಕಾರಿ ಡಿಸೇಲ್ ಹಾಕಿಕೊಂಡ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕವೇ ಈ ವಿಚಾರ ಡಿಸಿಎಂ ಸವದಿ ಅವರ ಗಮನಕ್ಕೆ ಬಂದಿದೆ.ಆ ತಕ್ಷಣವೇ ತಮ್ಮ ಖಾಸಗಿ ವಾಹನದ ಚಾಲಕನ್ನ ಕರೆಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಬೆಳಗಾವಿ ಕೆಎಸಆರಟಿಸಿ ಡಿಸಿ ಮಹಾದೇವ ಮುಂಜಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಣೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ 3ನೇ ಡಿಪೋದ ಕ್ಲಾರಕ್ ಮಾಡಿ ಪ್ರಮಾದದಿಂದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಅಲ್ಲದೇ ತಪ್ಪಿತ್ತಸ್ಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಡಿಸಿಎಂ ಲಕ್ಷ್ಮಣ ಸವದಿ ಸೂಚಿಸಿದ್ದಾರೆ.
ಹಾಗೇ ಲಕ್ಷ್ಮಣ ಸವದಿ ಅವರನ್ನ ಹತ್ತಿರದಿಂದ ನೋಡಿದವರಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಸರ್ಕಾರ ಮತ್ತು ಇಲಾಖೆಯಲ್ಲಿ ಇರುವ ಲೋಪಗಳನ್ನ ಸರಿ ಪಡಿಸುವ ಕೆಲಸವನ್ನ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಡುತ್ತಲೇ ಬಂದಿದ್ದಾರೆ. ಅಧಿಕಾರಿದ ದುರುಪಯೋಗ ಮಾಡುವವರನ್ನ, ಮಾಡಿಕೊಂಡುವರನ್ನ ಸ್ವಯಂ ಲಕ್ಷ್ಮಣ ಸವದಿ ಅವರೇ ಅನೇಕ ಸಂದರ್ಭದಲ್ಲಿ ಚಳಿಬಿಡಿಸಿದ್ದಾರೆ. ಈ ಘಟನೆ ಉಪಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ನಡೆದಿದೆ. ಚಾಲಕ ಮತ್ತು ಸಾರಿಗೆ ಸಿಬ್ಬಂದಿ ಮಾಡಿದ ಯಡವಟ್ಟಿಗೆ ಅಪ್ಪಟ ಅಪರಂಜಿಯಂತಹ ನಮ್ಮ ಸಾಹುಕಾರ ಮೇಲೆ ಗೂಬೆ ಕೂಡಿಸುವುದು, ಪ್ರಶ್ನೆ ಮಾಡುವುದು ಸೂಕ್ತವಲ್ಲ ಅಂತಾ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭಿಮಾನಿಗಳು ಹೇಳುತ್ತಿದ್ದಾರೆ.