ಸೈಲೆಂಟ್ ಆಗಿಯೇ ಶಾಕ್ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ… ಸಾಹುಕಾರ್ ಬಿಟ್ಟು ಲಕ್ಷ್ಮೀ ತಾಯಿಗೆ ಜೈ ಎಂದ ಮತದಾರರು


ಬೆಳಗಾವಿ: ಮತ್ತೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮತದಾರರು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ತಮ್ಮ ಮನೆ ಮಗಳು ಅಂತಾ ಸಾಬೀತು ಪಡೆದಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ನಾಯಕರನ್ನ ತಮ್ಮನ್ನು ತಾವು ಮುಟ್ಟಿನೋಡಿಕೊಳ್ಳುವಂತೆ ಮಾಡಿದ್ದಾರೆ.

ಹೌದ… ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಅರಳಿಸುವ ಗುರಿ ಹೊಂದಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಣ ಬಲ, ತೋಳಬಲ, ಅಧಿಕಾರಿ ಬಲದ ಪ್ರಯೋಗವನ್ನ ಮಾಡಿ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸ್ವಯಂ ಅಖಾಡ ಇಳದಿದ್ದರು. 2023 ರ ವಿಧಾನ ಸಭೆ ಚುನಾವಣೆಗೆ ಗ್ರಾಮ ಪಂಚಾಯತಿ ಚುನಾವಣೆಯನ್ನ ಪ್ರಯೋಗ ಶಾಲೆ ಮಾಡಿಕೊಂಡಿದ್ದರು.

ಆದ್ರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಗೋಕಾಕ ಸಾಹುಕಾರ್ ಕಸರತ್ತು ಕೈಗೂಡಲಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರು ಮನೆ ಮಗಳು ಲಕ್ಷ್ಮೀ ಹೆಬ್ಬಾಳಕರ ಅವರ ಅಭಿವೃದ್ಧಿ ಮಂತ್ರಕ್ಕೆ ಜೈ ಅಂದಿದ್ದಾರೆ. ಪಕ್ಷ, ಜಾತಿ, ಲೀಡರ್ ಲೆಕ್ಕಾಚಾರಕ್ಕಿಂತಲೂ.. ಮನೆ ಮಗಳ ಕಾರ್ಯಕ್ಕೆ ಜೈ ಅಂದಿದ್ದಾರೆ. ಇದರಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕನ್ನಡ ಭಾಗ , ಮರಾಠಿ ಭಾಗದ ಪ್ರದೇಶದಲ್ಲೂ ಲಕ್ಷ್ಮೀ ಹೆಬ್ಬಾಳಕರ ಅಭಿವೃದ್ಧಿ ಕಾರ್ಯಗಳು ಮ್ಯಾಜಿಕ್ ಮಾಡಿದೆ. ಅದರಲ್ಲೂ ಬಡಾಲ ಅಂಕಲಗಿ, ಕುದ್ರೆಮನಿ, ಹಿರೇಬಾಗೇಡಿ, ಬಿಕೆ ಕಂಗ್ರಾಳಿ, ಹಿಂಡಲಗಾ, ತುರಮರಿ, ಕಮಕಾರಟ್ಟಿ ಗ್ರಾಮ ಪಂಚಾಯತಿ ಅಲ್ಲಿ ಲಕ್ಷ್ಮೀ ತಾಯಿಗೆ ಜೈ ಅಂದಿದ್ದಾರೆ ಮತದಾರ ಪ್ರಭುಗಳು. ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಆಡಳಿತ ರೂಢ ಬಿಜೆಪಿಗೆ ಶಾಕ್ ಕೊಟ್ಟಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೈಲೆಂಟ್ ಆಗಿಯೇ ಸಾಹುಕಾರ್ ಗೆ ಸೈಡ್ ಮಾಡಿದ ಮತದಾರರು.