ಬೆಳಗಾವಿ ಪ್ರತಿಭೆಗೆ ನಟ ದರ್ಶನ್ ಆರ್ಥಿಕ ನೆರವು;ಗಿನ್ನಿಸ್ ವಲ್ಡ್ ರಿಕಾರ್ಡ್ ನಿರ್ಮಿಸಿದ ಅಭಿಷೇಕ ನವಲೆ


ಮಹಾಂತೇಶ ಇರಳಿ
ಬೆಳಗಾವಿ: ಚಾಲೆಂಜಿಂಗ್ ಸ್ಟಾರ್ ದರ್ಶನ ತೂಗುದೀಪ ಅಂದು ಪ್ರೋತ್ಸಾಹ ನೀಡಿದಕ್ಕೆ ಇಂದು ಬೆಳಗಾವಿಯ ಯುವಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ
ಹೌದು…ಡಿ ಬಾಸ್ ದರ್ಶನ ಸದಾ ಸೈಲೆಂಟ್ ಆಗಿ ಬಡವರಿಗೆ, ಕ್ರೀಡಾ ಪಟುಗಳಿಗೆ ನೆರವು ನೀಡುತ್ತಲೇ ಇರುತ್ತಾರೆ. ಹಾಗೇಯೇ ದರ್ಶನ ಬೆಳಗಾವಿಯ ಯುವಕನಿಗೆ ಅಂದು ಪ್ರೋತ್ಸಾಹ ನೀಡಿರದಿದ್ದರೇ ಇಂದು ಇಷ್ಟೊಂದು ದೊಡ್ಡ ಸಾಧನೆ ಸಾಧ್ಯವಾಗುತ್ತಿರಲಿಲ್ಲ.

ಬೆಳಗಾವಿ ಯುವಕ ಸ್ಕೇಟಿಂಗನಲ್ಲಿ ಕರ್ನಾಟಕದ ಕೀರ್ತಿಯನ್ನ ಬೆಳಗುತ್ತಿದ್ದಾನೆ. ಸ್ಕೇಟಿಂಗ್ ಪಟು ಅಭಿಷೇಕ ನವಲೆ ಎರಡನೇ ಬಾರಿಗೆ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ತುಂಬಾ ಕಡು ಬಡತನದಿಂದ ಬಂದಿರುವ ಅಭಿಷೇಕನ ಸತತ 15 ವರ್ಷಗಳ ನಿರಂತರ ಪರಿಶ್ರಮ ಇದರಲ್ಲಿ ಅಡಗಿದೆ. ಬೆಳಗಾವಿಯ ಈ ಸ್ಕೇಟಿಂಗ್ ಪಟು ಅಭಿಷೇಕ 100 ಮೀಟರ್ ಇನ್ ಲೈನ್ ಸ್ಕೇಟಿಂಗ್ ವಿಭಾಗದಲ್ಲಿ ಮತ್ತೊಂದು ಗಿನ್ನಿಸ್ ದಾಖಲೆ ಮಾಡಿದ್ದಾನೆ.
2020 ನವಂಬರ್ 18ರಂದು ಬೆಳಗಾವಿಯ ರಾಮತೀರ್ಥ ನಗರದ ಗಣೇಶ ವೃತ್ತದಲ್ಲಿ ಅಭಿಷೇಕ ನವಲೆ 100 ಮೀಟರ್ ಇನ್ ಲೈನ್ ಸ್ಕೇಟಿಂಗನಲ್ಲಿ 12.97 ಸೆಕೆಂಡಗಳಲ್ಲಿ ಕ್ರಮಿಸಿದ್ದಾನೆ. ಈ ದಾಖಲೆಯನ್ನ ಗಿನ್ನಿಸ್ ಸಂಸ್ಥೆ ಪರಿಗಣಿಸಿದೆ, ಅಲ್ಲದೇ 100 ಮೀಟರ್ ಇನಲೈನ್ ಸ್ಕೇಟಿಂಗ್ ವಿಭಾಗದಲ್ಲಿ ಅಭಿಷೇಕ ಹೆಸರನ್ನ ದಾಖಲಿಸಿದ್ದಾರೆ.
ಈ ಮೊದಲು ಅಭಿಷೇಕ 2019ರಲ್ಲಿ 13.96 ಸೆಕೆಂಟಗಳಲ್ಲಿ 100 ಮೀಟರ್ ಕ್ರಮಿಸಿ ಅಭಿಷೇಕ ಈ ಹಿಂದೆ ಈ ಗಿನ್ನಿಸ್ ದಾಖಲೆ ನಿರ್ಮಿಸಿದ್ದನು. ಇದನ್ನ 2019 ಮೇ ತಿಂಗಳಿನಲ್ಲಿ ಆಸ್ಟ್ರೇಲಿಯಾದ ಡೇವಿಡ್ ಸಾಲಿಸ್ ಬರಿಯಾ 13.24 ಸೆಕೆಂಡಗಳಲ್ಲಿ ಕ್ರಮಿಸಿ ದಾಖಲೆ ಬ್ರೇಕ್ ಮಾಡಿದ್ದನು.
ಈಗ ಅಭಿಷೇಕ ಡೇವಿಡ್ ದಾಖಲೆಯನ್ನ ಮುರಿದು ಭಾರತದ ಕೀರ್ತಿಯನ್ನ ಹೆಚ್ಚಿಸಿದ್ದಾನೆ.
ಇನ್ನು ಅಭಿಷೇಕ ದಾಖಲೆಗೆ ಮೂಲಕ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ ತೂಗುದೀಪ. ಅಭಿಷೇಕ ಅಂತರ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆ ಆಗಿರುತ್ತಾನೆ. ಆದ್ರೆ ವಿದೇಶಕ್ಕೆ ಕಳುಹಿಸಿಕೊಡುವಷ್ಟು ಹಣ ತಂದೆ ತಾಯಿ ಬಳಿ ಇರುವುದಿಲ್ಲ. ಈ ವಿಚಾರ ಮಾಧ್ಯಮಗಳ ಮೂಲಕ ನಟ ದರ್ಶನ ಅವರಿಗೆ ಗೊತ್ತಾಗುತ್ತದೆ. ಆಗ ದರ್ಶನ ಬೆಳಗಾವಿ ಜಿಲ್ಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಚಿತ್ರಿಕರಣದಲ್ಲಿ ಇರುತ್ತಾರೆ. ಹೀಗಾಗಿ ಅಭಿಷೇಕ ಮತ್ತವರ ಕುಟುಂಬಸ್ಥರನ್ನ ದರ್ಶನ ಬೆಳಗಾವಿ ತಾಲೂಕಿನ ಮಾವೀನಕಟ್ಟಿ ಗ್ರಾಮಕ್ಕೆ ಕರೆಸಿಕೊಳ್ಳುತ್ತಾರೆ. 25 ಸಾವಿರ ರುಪಾಯಿ ಹಣವನ್ನ ನಟ ದರ್ಶನ ಅಭಿಷೇಕಗೆ ನೀಡುತ್ತಾರೆ. ಆ ಹಣದಲ್ಲಿ ಸ್ಪರ್ಧೆಗೆ ಬೇಕಿದ್ದ ಸ್ಕೇಟಿಂಗ್ ಮತ್ತು ವಿದೇಶಕ್ಕೆ ಹೋಗಿ ಬರಲು ಕರ್ಚು ಮಾಡುತ್ತಾರೆ. ಅಂದಿನಿಂದ ಇಂದಿನ ವರೆಗೂ ಅಭಿಷೇಕ ಸ್ಕೇಟಿಂಗನಲ್ಲಿ ಹಿಂದೆ ತಿರುಗಿ ನೋಡಿಲ್ಲ. ದಾಸ್ ಕೊಟ್ಟ ಪ್ರೋತ್ಸಾಹದಿಂದ ಇಂದು ಅಭಿಷೇಕ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದ್ದಾನೆ. ಅಭಿಷೇಕಗೆ ಸದಾ ತಂದೆ ತಾಯಿ ಮತ್ತು ಕೋಚ್ ಸೂರ್ಯಕಾಂತ ಬೆನ್ನಿಗೆ ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲದೇ, 15 ವರ್ಷಗಳಿಂದ ಅಭಿಷೇಕ ಸ್ಕೇಟಿಂಗನಲ್ಲಿ ವರ್ಡ್ ರಿಕಾರ್ಡ್, ಲಿಮ್ಕಾ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹೀಗೆ ಒಂದೊಂದೆ ದಾಖಲೆಗಳನನ್ ನಿರ್ಮಿಸುತ್ತಿದ್ದಾರೆ.
