ಬೆಳಗಾವಿ ಪಾಲಿಕೆ ಮುಂದೆ ಹಾರಾಡಿದ ಕನ್ನಡದ ಧ್ವಜ


ಬೆಳಗಾವಿ: ಕನ್ನಡಿಗರ ಬಹುದಿನಗಳ ಕನಸಿನಂತೆ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜವನ್ನ ಧ್ವಜ ಸ್ತಂಭ ಸಮೇತ ಧ್ವಜಾರೋಹಣ ಮಾಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಪಾಲಿಕೆ ಮುಂದೆ ಕನ್ನಡ ಧ್ವಜವನ್ನು ಪ್ರತಿಷ್ಠಾಪನೆ ಮಾಡಿದ್ರು. ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು ಮತ್ತು ಪೊಲೀಸರ ಮುಂದೆ ತೀವ್ರ ವಾಗ್ವಾದ ನಡೆಯಿತು. ಪ್ರಾಣಬಿಟ್ಟೇವು ಹೊರತು ಧ್ವಜಸ್ತಂಭ ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮತ್ತೆ ಬೆಳಗಾವಿ ಪಾಲಿಕೆ ಮುಂದೆ ಹಾರಾಡಿದ ಕನ್ನಡ ಧ್ವಜ. ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಹಳದಿ ಕೆಂಪು ಧ್ವಜ ಹಾರಾಟ. ಪಾಲಿಕೆ ಮುಂದೆ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿದ ಹೋರಾಟಗಾರರು. ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜಾರೋಹಣ. ಕರ್ನಾಟಕ ಮಾತೆಗೆ, ತಾಯಿ ಭುವನೇಶ್ವರಿ ಜಯವಾಗಲಿ ಅಂತಾ ಘೋಷಣೆ ಕೂಗಿ ಧ್ವಜಾರೋಹಣ. ಪೊಲೀಸರು ಹೋರಾಟಗಾರ ಮಧ್ಯೆ ಜಟಾಪಟಿ. ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಾಟದ ಹೈಡ್ರಾ.
ರಾಷ್ಟ್ರ ಗೀತೆ ಹಾಡುತ್ತಾ ಕನ್ನಡ ಧ್ವಜಾರೋಹಣ. ಧ್ವಜ ಸ್ತಂಭ ಮುಟ್ಟಿದೆ ನಮ್ಮ ಹೆಣ ಹೆಣಬೀಳುತ್ತದೆ. ಧ್ವಜಾರೋಹಣ ಕ್ಕೆ ಅಡ್ಡಿ ಪಡಿಸಿದ ಪೊಲೀಸರ ವಿರುದ್ಧ ಅಸಮಾಧಾನ. ಧ್ವಜ ಸ್ತಂಭ ಪ್ರತಿಷ್ಠಾಪನೆ ಮಾಡಿ ಕನ್ನಡ ಹೋರಾಟಗಾರು. ಸುವರ್ಣ ಸೌಧ ಮುಂದೆ, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಕನ್ನಡ ಧ್ವಜ ಹಾರಾಡುತ್ತಿದೆ. ಬೆಳಗಾವಿ ಪಾಲಿಕೆ ಮುಂದೆ ಯಾಕೇ ಕನ್ನಡಧ್ವಜ ಬಾವುಟ ಹಾರಿಸಬಾರದು ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಪ್ರಶ್ನೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಇರಿಸಲು ಯತ್ನ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಕನ್ನಡ ಧ್ವಜ ಇರುವ ಸ್ತಂಭ ಸ್ಥಾಪನೆಗೆ ಯತ್ನ.
ಪೊಲೀಸರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರ ಮಧ್ಯೆ ವಾಗ್ವಾದ. ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಸ್ತಂಭ ತಂದು ನಿಲ್ಲಿಸಿದ ಕಾರ್ಯಕರ್ತರು. ಧ್ವಜ ಸ್ಥಂಬ ಸ್ಥಾಪನೆಗೆ ಯತ್ನಿಸಿ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳುಕರ್ ನೇತೃತ್ವದಲ್ಲಿ ಸ್ಥಾಪನೆ. ಕನ್ನಡ ಧ್ವಜ ಸ್ಥಾಪನೆಗೆ ಪೊಲೀಸರ ವಿರೋಧ ಹಿನ್ನೆಲೆ ಪೊಲೀಸರ ಜತೆಗೆ ವಾಗ್ವಾದ

ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಸ್ಥಾಪನೆ ಹಿನ್ನೆಲೆ ಹೋರಾಟಗಾರ್ತಿ ಕಸ್ತೂರಿ ಬಾವಿಗೆ ಚಪ್ಪಲಿ ತೊಡಸಿ ಸನ್ಮಾನ. ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಸ್ಥಾಪನೆ ಹಿನ್ನೆಲೆ. ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಬಾವಿಗೆ ಚಪ್ಪಲಿ ತೊಡಸಿ ಸನ್ಮಾನ .ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರುವವರೆಗೆ ಚಪ್ಪಲಿ ತೋಡೊದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕಸ್ತೂರಿ ಬಾವಿ. ಹಲವು ವರ್ಷಗಳಿಂದ ಬರಿಗಾಲಿನಲ್ಲಿಯೇ ಓಡಾಡುತ್ತಿದ್ದ ಕಸ್ತೂರಿ ಬಾವಿ. ಇಂದು ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಾಟ ಹಿನ್ನೆಲೆ ಕಸ್ತೂರಿ ಬಾವಿಗೆ ಚಪ್ಪಲಿ ತೊಡಿಸಿ, ಸನ್ಮಾನಿಸಿದ ಕನ್ನಡಪರ ಹೋರಾಟಗಾರರು. ಇದರ ಜೊತೆಗೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರ ಹಿನ್ನೆಲೆ. ಅನುಮತಿ ಇಲ್ಲದೆ ಕನ್ನಡ ಧ್ವಜ ಸ್ಥಂಭ ಸ್ಥಾಪನೆ ಹಿನ್ನೆಲೆ. ಪೊಲೀಸರು ಹಾಗೂ ಹೋರಾಟಗಾರ ನಡುವೆ ವಾಗ್ವಾದ.
ಅನುಮತಿ ಇಲ್ಲದೇ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಸ್ಥಾಪನೆ ಹಿನ್ನೆಲೆ ಕನ್ನಡಪರ ಹೋರಾಟಗಾರರು ಹಾಗೂ ಪೋಲಿಸರ ಮಧ್ಯೆ ವಾಗ್ವಾದ. ಪಾಲಿಕೆ ಅನುಮತಿ ಇಲ್ಲದೇ ಕನ್ನಡ ಧ್ವಜ ಸ್ಥಾಪಿಸಿದ್ದಕ್ಕೆ ಪೋಲಿಸರ ಆಕ್ಷೇಪ. ಕನ್ನಡ ಧ್ವಜ ಸ್ಥಾಪನೆಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದ ಹೋರಾಟಗಾರರು. ಶ್ರೀನಿವಾಸ ತಾಳೂಕರ್ ಹಾಗೂ ಪೋಲಿಸರ ಮಧ್ಯೆ ವಾಗ್ವಾದ. ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜಗಂಬಕ್ಕೆ ಹಗ್ಗ ಕಟ್ಟಿ ಕೊರಳಿಗೆ ಹಾಕಿಕೊಂಡ ಶ್ರೀನಿವಾಸ ತಾಳೂಕರ್. ಪೋಲಿಸರು ಧ್ವಜ ಕಂಬ ತೆರವು ಮಾಡಬಹುದಾದ ಹಿನ್ನೆಲೆ ಕೊರಳಿಗೆ ಹಗ್ಗ ಬಿಗಿದುಕೊಂಡ ಹೋರಾಟಗಾರ. ಕನ್ನಡಪರ ಹೋರಾಟಗಾರರು ಹಾಗೂ ಪೋಲಿಸರ ಮಧ್ಯೆ ವಾಗ್ವಾದ, ನೂಕಾಟ. ನೂಕಾಟದಲ್ಲಿ ಶ್ರೀನಿವಾಸ್ ತಾಳೂಕರ್ ಅಂಗಿ ಹರಿದ ಪೋಲಿಸರು. ಕೊರಳಿಗೆ ಹಾಕಿಕೊಂಡಿರುವ ಹಗ್ಗ ತೆರವುಗೊಳುಸುವಂತೆ ಪೋಲಿಸರ ಮನವಿ. ಪಾಲಿಕೆ ಅನುಮತಿ ಇಲ್ಲದೇ ಕನ್ನಡ ಧ್ವಜ ಸ್ಥಾಪಿಸಿದ್ದಕ್ಕೆ ಪೋಲಿಸರ ಆಕ್ಷೇಪ. ಕನ್ನಡ ಧ್ವಜ ಸ್ಥಾಪನೆಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದ ಹೋರಾಟಗಾರರು. ಶ್ರೀನಿವಾಸ ತಾಳೂಕರ್ ಹಾಗೂ ಪೋಲಿಸರ ಮಧ್ಯೆ ವಾಗ್ವಾದ. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಭಾರೀ ಹೈಡ್ರಾಮಾ. ಕೊರಳಿಗೆ ಸಾಮೂಹಿಕವಾಗಿ ಹಗ್ಗ ಕಟ್ಟಕೊಂಡ ಕನ್ನಡಪರ ಹೋರಾಟಗಾರರು. ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜಗಂಬಕ್ಕೆ ಹಗ್ಗ ಕಟ್ಟಿ ಕೊರಳಿಗೆ ಹಾಕಿಕೊಂಡ ಶ್ರೀನಿವಾಸ ತಾಳೂಕರ್ ಮತ್ತು ಹೋರಾಟಗಾರರು. ಪೋಲಿಸರು ಧ್ವಜ ಕಂಬ ತೆರವು ಮಾಡಬಹುದಾದ ಹಿನ್ನೆಲೆ ಕೊರಳಿಗೆ ಹಗ್ಗ ಬಿಗಿದುಕೊಂಡ ಹೋರಾಟಗಾರರು. ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಭೇಟಿ. ಕನ್ನಡಪರ ಹೋರಾಟಗಾರರೊಂದಿಗೆ ಮಾತುಕತೆ.ಕೊರಳಿಗೆ ಹಾಕಿಕೊಂಡಿರುವ ಹಗ್ಗ ತೆರವುಗೊಳುಸುವಂತೆ ಪೋಲಿಸರ ಮನವಿ. ಪಾಲಿಕೆ ಅನುಮತಿ ಇಲ್ಲದೇ ಕನ್ನಡ ಧ್ವಜ ಸ್ಥಾಪಿಸಿದ್ದಕ್ಕೆ ಪೋಲಿಸರ ಆಕ್ಷೇಪ. ಇನ್ನೂ ಹೋರಾಟ ಮುಂದೊರೆದಿದೆ.
