ಕಣ್ಣೀರಿಟ್ಟ ಮಹಿಳೆಯನ್ನ ಶಾಸಕಿ ಲ ಕ್ಷ್ಮೀ ಹೆಬ್ಬಾಳಕರ ಅಪ್ಪಿಕೊಂಡು ಸಾಂತ್ವನ ಹೇಳಿದ್ರು…ಬಳಿಕ ಲಕ್ಷ್ಮೀ ತಾಯಿ ಫೌಂಡೇಶನದಿಂದ ಧೈರ್ಯ ತುಂಬಿದ್ರು ಮೆಡ್ಂ…


ಬೆಳಗಾವಿ: ಬಡ ಕುಟುಂಬದ ಕಣ್ಣೀರು ಒರೆಸಿದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ. ಭಾನುವಾರ ಶಾಸಕಿ ಲಕ್ಷ್ಮೀ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಪರುಶರಾಮ ಭೀಮಾ ಉಚಗಾಂವಕರ್ ಹಾಗೂ ಯಲ್ಲಪ್ಪ ರಾಮಾ ನರೋಟಿ ಅವರ ಮನೆಗೆ ಭೇಟಿ ನೀಡಿದ್ರು.

ಈ ಬಡ ಕುಟುಂಬಗಳ ಬದುಕಿಗೆ ಆಸರೆಯಾಗಿದ್ದ ಹದಿನೈದು ಕುರಿಗಳು ವಿಷಪೂರಿತ ಸಸ್ಯಗಳನ್ನು ತಿಂದು ಸಾವನ್ನಪ್ಪಿದ್ದವು. ಈ ವಿಚಾರ ಗೊತ್ತಾಗುತ್ತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಈ ಬಡ ಕುಟುಂಬಗಳ ಮನೆ ಭೇಟಿ ನೀಡಿದ್ರು. ಶಾಸಕಿ ಮನೆಗೆ ಬರುತ್ತಿದ್ದಂತೆ ದುಃಖವನ್ನು ತಡೆಯಲಾಗದೇ ಮಹಿಳೆ ಕಣ್ಣೀರು ಹಾಕಿದಳು. ನೊಂದ ಮಹಿಳೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಪ್ಪಿಕೊಂಡು ಸಂತೈಸಿದ್ರು.
ಅಲ್ಲದೇ ಲಕ್ಷ್ಮೀ ತಾಯಿ ಫೌಂಡೇಷನದಿಂದ ಪರಿಹಾರದ ಚೆಕ್ ನೀಡಿ ಧೈರ್ಯ ತುಂಬಿದ್ರು. ಇಷ್ಟೇ ಅಲ್ಲದೇ ಸರ್ಕಾರದಿಂದಲೂ ಅಗತ್ಯವಾದ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ರು. ಆರ್ಥಿಕವಾಗಿ ಧನ ಸಹಾಯ ಮಾಡಿ ಧೈರ್ಯವನ್ನು ತುಂಬಿ ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಆಪ್ತರಾದ
ಬಾಗಣ್ಣ ನರೋಟಿ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಸಾಥ್ ನೀಡಿದರು.
