ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ; ಸ್ವಗ್ರಾಮದಲ್ಲಿ ಮತ ಹಾಕಿದ ಡಿಸಿಎಂ ಲಕ್ಷ್ಮಣ ಸವದಿ


ಶ್ರೀನಿವಾಸ ಪಟ್ಟಣ
ಬೆಳಗಾವಿ: ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮ್ಮ ಕುಟುಂಬ ಸಮೇತ ಬಂದು ಮತ ಚಲಾಯಿಸಿದ್ರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ್ ಪಿ.ಕೆ ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನವನ್ನ ಮಾಡಿದ್ರು. ಮತದಾನ ಪ್ರತಿಕ್ರಿಯೆ ಆರಂಭ ಕೇವಲ ಗಂಟೆಯಲ್ಲಿ ಮತಗಟ್ಟೆ ಕೇಂದ್ರ ಡಿಸಿಎಂ ಲಕ್ಷ್ಮಣ ಸವದಿ ಮತ್ತವರ ಪುತ್ರ ಬಿಜೆಪಿ ಯುವ ನಾಯಕ ಚಿದಾನಂದ ಸವದಿ ಆಗಮಿಸಿದ್ರು. ಸರದಿ ಸಾಲಿನಲ್ಲಿ ನಿಂತು ಕೊಂಡೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ರು.

ಮಾಸ್ಕ ಧರಿಸಿ ಕೋವಿಡ್ ನಿಯಮ ಪಾಲಿಸಿ, ಮತದಾನದ ಬಳಿಕ ಸಾಯಿ ಹೆಚ್ಚಿರುವ ಬೆರಳನ್ನ ಮಾಧ್ಯಮದವರಿಗೆ ಪ್ರದರ್ಶಿಸಿದ್ರು. ಇಂದು ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕಿನಲ್ಲಿ ಮತದಾನ ನಡೆಯಿತು. ಜಿಲ್ಲೆಯ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲೂಕಿನ ಒಟ್ಟು 218 ಗ್ರಾಮ ಪಂಚಾಯತಿಗಳ 3587 ಸ್ಥಾನಗಳಿಗೆ ಮತದಾನ ನಡೆಯಿತು. 9472 ಅಭ್ಯರ್ಥಿಗಳ ಭವಿಷ್ಯ ಇಂದು ಮತ ಪಟ್ಟಿಗೆಯಲ್ಲಿ ಭದ್ರವಾಗಿದೆ.
