ಹುಂಜದ ಬರ್ತ್ ಡೇ ಪಾರ್ಟಿ

ಹುಂಜದ್ ಬರ್ತ್ ಡೇ ಪಾರ್ಟಿ ಮಾಡಿದ ಪುಟಾಣಿ ಮಕ್ಕಳು
ಮಹಾಂತೇಶ ಇರಳಿ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹುಂಜದ ಬರ್ತ್ ಡೇ ಜೋರಾಗಿ ಆಚರಿಸಲಾಗಿದೆ. ಹುಂಜದ ಬರ್ತ್ ಡೇ ಹಿನ್ನೆಲೆ ಕೇಕ್ ಕತ್ತರಿಸಿ ಸಂಭ್ರಮ ಪುಟಾಣಿಗಳು ಸಂಭ್ರಮಿಸಿದ್ದಾರೆ. ಹೌದು. ನಾವು ಮಕ್ಕಳ ಬರ್ತ್ ಡೇ, ಅಪ್ಪ ಅಮ್ಮನ ಬರ್ತ್ ಡೇ, ಸ್ನೇಹಿತರ ಬರ್ತ್ ಡೇ, ಪ್ರೀಯತಮೆ ಬರ್ತ್ ಡೇ ಹಾಗೂ ಸಾಕು ನಾಯಿ ಬರ್ತ್ ಡೇ ಮಾಡಿರುವುದನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಗಡಿ ಜಿಲ್ಲೆ ಬೆಳಗಾವಿ ಮಾಳಿ ಗಲ್ಲಿಯಲ್ಲಿ ಅಪರೂಪದ ಬರ್ತ್ ಡೇ ಭಾನುವಾರ ಸಾಕ್ಷಿಯಾಗಿದೆ. ಲೆಂಗರಕಂಡೆ ಕುಟುಂಬ ಸಾಕಿರೊ ಹುಂಜ್.

ಹುಂಜಕ್ಕೆ ಶೇರು, ವೀರು ಎಂದು ನಾಮಕರಣ ಮಾಡಿದ್ದಾರೆ. ಈ
ಹಂಜದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಪುಟಾಣಿ ಮಕ್ಕಳು, ಅಕ್ಕಪಕ್ಕದ ನಿವಾಸಿಗಳು ಹುಂಜದ
ಬರ್ತ್ ಡೇ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಮನೆ ಮಗನ ಬರ್ತ್ ಡೇ ಅಷ್ಟೇ ಗ್ರ್ಯಾಂಡ್ ಆಗಿ ಹುಂಜದ ಬರ್ತ್ ಡೇಯನ್ನ ಲೆಂಗರಕಂಡೆ ಕುಟುಂಬದವರು ಆಚರಿಸಿದ್ದಾರೆ. ಕೋಳಿಗಳ ಬರ್ತ್ ಈಗ ರಾಜ್ಯ ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
