ಬೆಳಗಾವಿ ಬಸ್ ನಿಲ್ದಾಣದಲ್ಲಿ ಈ ರಾಜಾನ್ನದ್ದೆ ಹವಾ…!


ಮಹಾಂತೇಶ ಇರಳಿ
ಬೆಳಗಾವಿ: ಈತ ಖಾಕಿ ತೊಟ್ಟ ಪೊಲೀಸ್ ಅಲ್ಲ. ಆದ್ರು ಪೊಲೀಸ್ ಕೆಲಸ ಮಾಡ್ತಾನೆ. ಕಳ್ಳರು ಈತನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಪೊಲೀಸ್ ರಾಜನನ್ನು ನೀವು ನೋಡಬೇಕಂದ್ರೆ ಕುಂದಾನಗರಿ ನಗರಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಕ್ಕೆ ಭೇಟಿ ಕೊಡಲೇಬೇಕು.
ಹೌದು…ನಾವಿವತ್ತು ನಿಮಗೆ ಹೇಳುತ್ತಿರುವುದು ಅಪರೂಪದ ಸ್ಟೋರಿ. ಎಲ್ಲರೂ ಮನೆಯಲ್ಲಿ ಶ್ವಾನಗಳನ್ನ ಸಾಕುತ್ತಾರೆ. ಆದ್ರೆ ನಮಗೆ ಅದೇಷ್ಟೋ ಬೀದಿ ನಾಯಿಗಳು ಕಣ್ಣಿಗೆ ನೋಡಲು ಸಿಗುತ್ತವೇ. ಇಲ್ಲೊಂದು ಬೀದಿ ನಾಯಿ ಪೊಲೀಸ್ ಡಾಗ್ ತರಹ ಕೆಲಸ ಮಾಡುತ್ತಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಇದೇ ಮಾರ್ಕೆಟ್ ಪೊಲೀಸ್ ಠಾಣೆ ಹವಾಲ್ದಾರ್ ಎಸ.ಬಿ.ಮಡಿವಾಳರ ಅವರನ್ನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದೋಬಸ್ತಗೆ ನಿಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಹವಾಲ್ದಾರ್ ಎಸ.ಬಿ.ಮಡಿವಾಳರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹವಾಲ್ದಾರ್ ಎಸ.ಬಿ.ಮಡಿವಾಳರ ಕಣ್ಣಿಗೆ ಬೀದಿ ನಾಯಿ ಒಂದು ಕಾಣಿಸುತ್ತದೆ. ಆ ನಾಯಿಗೆ ಬಿಸ್ಕತ್ತು, ಆಹಾರ ನೀಡಿ ಮಾನವೀಯತೆ ಮರೆಯುತ್ತಾರೆ. ಇದು ದಿನವೂ ಕರ್ತವ್ಯ ದೊಂದಿಗೆ ಹಸಿದ ನಾಯಿಗೂ ಆಹಾರ ನೀಡುವ ಕೆಲಸವನ್ನ ಹವಾಲ್ದಾರ್ ಮಡಿವಾಳರ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಈ ನಾಯಿಗೆ ರಾಜಾ ಅಂತಲೂ ಹೆಸರನ್ನ ಇಟ್ಟಿದ್ದಾರೆ ಹವಾಲ್ದಾರ್ ಮಡಿವಾಳರ.


ಹೀಗೆ ಅನ್ನ ಹಾಕಿದ ದೊರೆಯ ಜೊತೆಗೆ ಬೀದಿ ನಾಯಿ ಅಂದ್ರೆ ರಾಜಾ ಸಹ ಪೊಲೀಸ್ ಡ್ಯೂಟಿ ಮಾಡುತ್ತದೆ. ಬಸ್ ನಿಲ್ದಾಣದಲ್ಲಿ ಯಾರೇ ಕಳ್ಳರ ಸುಳಿವು ಸಿಕ್ಕರೇ ತಕ್ಷಣವೇ ಎಲ್ಲರನ್ನ ಎಚ್ಚರಿಸುವ ಕೆಲಸವನ್ನ ಮಾಡುತ್ತದೆ. ಯಾರಾದರೂ ಗಲಾಟೆ ಮಾಡುತ್ತಿದ್ದರೆ ಬೊಗಳುವ ಮೂಲಕ ಅವರನ್ನ ಎಚ್ಚರಿಸುವ ಕೆಲಸವನ್ನ ಮಾಡುತ್ತದೆ. ಹೀಗೆ ಅನ್ನ ಹಾಕಿದ ದೊರೆಯ ಜೊತೆಗೆ ರಾಜಾ ಸಹ ಹಾಜರಾಗ್ತಾನೆ. ಯಾವುದೇ ಪ್ರಯಾಣಿಕರಿಗೆ ಈ ಪೊಲೀಸ್ ರಾಜಾ ತೊಂದರೆ ಮಾಡುವುದಿಲ್ಲ. ಕೇಂದ್ರ ಬಸ್ ನಿಲ್ದಾಣದ ಸುತ್ತಲೂ ಏನ ನಡೆಯುತ್ತಿರುತ್ತದೆ ಎನ್ನವುದನ್ನ ಈ ರಾಜಾ ಹದ್ದಿನ ಕಣ್ಣಿನ್ನು ಇಡುತ್ತಾನೆ. ಈ ರಾಜಾನ ದೊರೆ ನಿಷ್ಠೆ ಗೆ ನಾವೆಲ್ಲರೂ ಒಂದು ಸಲಾಂ ಹೇಳಲೇಬೇಕು.
