ನನ್ನ ವಿರುದ್ಧ ಷಡ್ಯಂತ್ರ ಮುಖವಷ್ಟೇ ಬೇರೆ ಬೇರೆ:ಲಕ್ಷ್ಮೀ ಹೆಬ್ಬಾಳಕರ


ಶ್ರೀನಿವಾಸ ಪಟ್ಟಣ
ಬೆಳಗಾವಿ: ಕಾಂಗ್ರೆಸ್ ವಕ್ತಾರೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸರ್ಕಾರದ ವಿರುದ್ಧ ವಾಗ್ದಾಳಿ. ಬೆಳಗಾವಿಯ ಮುರಳೀದರ ಕಾಲೋನಿ ಕಚೇರಿಯಲ್ಲಿ ಹೆಬ್ಬಾಳಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಎರಡು ವರ್ಷ ಪ್ರವಾಹದಿಂದ ತತ್ತರಿಸಿ ಹೋಗಿದೆ. ದುಡಿಯುವ ವರ್ಗ ಪ್ರವಾಹದಿಂದ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದೆ. ಕಳೆದ ಎರಡು ವರ್ಷದಿಂದ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಮಾಡುತ್ತಿಲ್ಲ. ಸುವರ್ಣ ಸೌಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಮಾಡಿದ್ರು ಅನ್ನು ಮಟ್ಟಕ್ಕೆ ನಗೆಪಾಟಲಿ ಮಾಡುತ್ತಿದ್ದಾರೆ. ಬಿಜೆಪಿದವರು ಬೆಳಗಾವಿಯಲ್ಲಿ ಕಾರ್ಯಕಾರಣಿ ಸಭೆ ಮಾಡುತ್ತಿದ್ದಾರೆ. ಜನರ ಸಮಸ್ಯೆ ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ರೆ ಬಿಜೆಪಿ ಪಕ್ಷ ಸಂಘಟನೆಗೆ ಮಹತ್ವ ಕೊಡುತ್ತಿದ್ದಾರೆ. ಕೇಂದ್ರ ದಿಂದ ಈವರೆಗೂ ಸೂಕ್ತ ವಾಗಿ ಪ್ರವಾಹ ಪರಿಹಾರ ನೀಡಿಲ್ಲ. ಸರ್ಕಾರ ಜನರಿಗೆ ಏನು ಮಾಡಿದ್ದಾರೆ ಎಂದು ಶ್ವೇತ ಪತ್ರವನ್ನ ಹೊರಡಿಸಲಿ. ಅಧಿವೇಶನ ಕ್ಕೆ ಕೊರೊನಾ ನೆಪ ಹೇಳುತ್ತಾರೆ. ಆದ್ರೆ ಬೆಳಗಾವಿ ಯಲ್ಲಿ ಕಾರ್ಯಕಾರಣಿ ನಡೆಸುತ್ತಾರೆ. ರಾಜ್ಯದಲ್ಲಿ ರಸ್ತೆ, ಕೆರೆ ಎಲ್ಲವೂ ಮಳೆ, ಪ್ರವಾಹದಿಂದ ಹಾಳಾಗಿದೆ. ಇದಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ ಅಂತಾರೆ. ಬಿಜೆಪಿಯವರಿಗೆ ಕಾರ್ಯಕಾರಣಿ ಮಾಡಲು ಹಣವಿದೇ ಎಂದು ಆಕ್ರೋಶ. ನೇಕಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯವರೇ ಶ್ರೀಮಂತ ಪಾಟೀಲ್ ಜವಳಿ ಸಚಿವರಾಗಿದ್ದಾರೆ. ಸರ್ಕಾರ ನೇಕಾರರ ಎಷ್ಟ ಸೀರೆ ಖರೀದಿಸಿದ್ದಾರೆ ಎಂದು ಹೇಳಬೇಕು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಆಯ್ತು ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ಪರವಾಗಿ ಇದೇ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೇ. ಆದ್ರೆ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆಯೋ, ಸಂಪುಟ ಪುನರ ರಚನೆಯೋ ಅನ್ನೋದರಲ್ಲಿ ಇದ್ದಾರೆ. ಶಾಸಕರಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೇಳಿದಷ್ಟು ಅನುದಾನ ಸರ್ಕಾರ ನೀಡಿಲ್ಲ. ನಾನು ಸರ್ಕಾರಕ್ಕೆ 10 ರುಪಾಯಿ ಅನುದಾನ ಕೇಳಿದ್ರೆ. ಬರೀ ಒಂದು ರುಪಾಯಿ ಮಾತ್ರ ನೀಡಿದ್ದಾರೆ. ಸಾಂಬ್ರಾ ಜಿಪಂ ಸದಸ್ಯ ರಾಜೀನಾಮೆ ನೀಡಿದ ವಿಚಾರ. ಜಿಪಂ ಸದಸ್ಯರನ್ನ ನಾವು ಗೆಲ್ಲಿಸಿ ತಂದಿವೆ. ಅನಂತರ ಅವರು ಎಂಎಲ ಎ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ರು. ಅವರು ಇದ್ದರೂ ಅಷ್ಟೇ ಹೋದ್ರು ಅಷ್ಟೇ ರಾಜಕಾರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ.
ಈ ಹಿಂದೆಯೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ರು. ಈಗಲೂ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಆದ್ರೆ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರ ಮುಖ ಅಷ್ಟೇ ಬೇರೆ ಬೇರೆಯಾಗಿದೆ ಎಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ವಾಗ್ದಾಳಿ. ನಾನು ಯಾವುದೇ ಸಮಾಜದ ಅಭಿವೃದ್ಧಿ ನಿಗಮದ ವಿರೋಧ ಅಲ್ಲ. ರಾಜಕೀಯ ಗಿಮಿಕ್ ಗೆ ಅಭಿವೃದ್ಧಿ ನಿಗಮ ಮಾಡಬಾರದು. ಸಮಾಜದ ಅಭಿವೃದ್ಧಿಗೆ ನಿಗಮಗಳು ಕೆಲಸ ಮಾಡಬೇಕು. ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಯಾರು ಬಯಸದೆ ಚುನಾವಣೆ ಬಂದಿದೆ.ಸುರೇಶ್ ಅಂಗಡಿ ನಿಧನ ಎಲ್ಲಾರಿಗೂ ದುಃಖವಾಗಿದೆ. ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಹೆಸರು ಮಾಧ್ಯಮದಲ್ಲಿ ಬಂದಿರುವುದು ನೋಡಿದ್ದೇನೆ. ಪಕ್ಷದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಸಚಿವ ಬಿ.ಸಿ.ಪಾಟೀಲ್ ಅವರ ಹೇಳಿಕೆ ವಿಚಾರ.ಇದು ನಿಜವಾದ ದುರಾದೃಷ್ಟ. ಬಿ.ಸಿ.ಪಾಟೀಲ್ ಅವರು ರೈತರು.ಬಿ.ಸಿ.ಪಾಟೀಲ್ ಅವರು ಬಿಜೆಪಿ ಗೆ ಹೋದ ಮೇಲೆ ಅವರ ಸಂಸ್ಕೃತಿ ಬದಲಾಗಿದೆ ಎಂದು ಹೆಬ್ಬಾಳಕರ ಹೇಳಿದ್ದಾರೆ.