ಕರ್ನಾಟಕ

ಮತ್ತೆ ಬೆಳಗಾವಿ ಜಿಲ್ಲೆ ವಿಭಜಿಸಿ, ಅಥಣಿ ಜಿಲ್ಲೆ ಕೂಗು..!

ಶ್ರೀನಿವಾಸ ಪಟ್ಟಣ/ಮಹಾಂತೇಶ ಇರಳಿ
ಬೆಳಗಾವಿ: ಮತ್ತೆ ಬೆಳಗಾವಿ ಜಿಲ್ಲೆಯ ವಿಭಜನೆ ಚರ್ಚೆ ಆರಂಭವಾಗಿದೆ. ಸರ್ಕಾರ ವಿಜಯನಗರ ಜಿಲ್ಲೆ ಘೋಷಿಸಿದ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ಚರ್ಚೆಗಳಿಗೆ ಜೀವ ಬಂದಿದೆ. ಈ ಬಾರಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿನಿಧಿಸುವ ಅಥಣಿ ತಾಲೂಕು ಜಿಲ್ಲೆಯಾಗಿ ಘೋಷಿಸುವಂತೆ ಕೂಗು ಕೇಳಿ ಬರುತ್ತಿದೆ.ಹೌದು. ರಾಜ್ಯದಲ್ಲಿಯೇ ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ದಿವಂಗತ ಜೆ.ಎಚ.ಪಟೇಲರ ಕಾಲದಿಂದಲೂ ಬೆಳಗಾವಿ ಜಿಲ್ಲೆ ವಿಭಜನೆಗೆ ಕೂಗು, ಹೋರಾಟಗಳು ನಡೆಯುತ್ತಲೇ ಇವೆ. ಅದರಲ್ಲೂ ಬೆಳಗಾವಿ ಜಿಲ್ಲೆಯನ್ನ ವಿಭಜನೆ ಮಾಡಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಹೀಗೆ ಮೂರು ಜಿಲ್ಲೆ ರಚನೆಗೆ ದಶಕಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಅದರಲ್ಲೂ ಅಭಿವೃದ್ಧಿ ದೃಷ್ಟಿಯಿಂದ, ಆಡಳಿತ್ಮಾಕ ದೃಷ್ಟಿಯಿಂದ ವಿಭಜನೆಗೆ ಹಕ್ಕೊತ್ತಾಯ ಮಾಡಲಾಗುತ್ತಿದೆ.


ಈಗ ನಮ್ಮ ಅಥಣಿ ಫೇಸ್‌ಬುಕ್‌ ಪುಟದಲ್ಲಿ ಅಥಣಿ ಜಿಲ್ಲೆ ಆಗಿಸುವ ಬಗ್ಗೆ ಮುಕ್ತ ಚರ್ಚೆ ಆರಂಭವಾಗಿವೆ. ನಿಯೋಜಿತ ನೂತನ ಅಥಣಿ ಜಿಲ್ಲಾ ನೀಲ ನಕ್ಷೆ ಈಗ ಸಾಕಷ್ಟು ಚರ್ಚೆ ಗೆ ಗ್ರಾಸವಾಗಿದೆ. ಅಥಣಿ ತಾಲ್ಲೂಕಿನ ಒಟ್ಟು ಹಳ್ಳಿಗಳ ಆಧಾರಿಸಿ ಕನಿಷ್ಠ 20 ಗ್ರಾಮಗಳನ್ನು ಹಂಚಿಸಿ ಒಂದು ಹೂಸ ತಾಲ್ಲೂಕು ರಚಿಸಿದ್ರೆ. ಕನಿಷ್ಠ ಒಟ್ಟು 4 ಹೂಸ ತಾಲ್ಲೂಕು ರಚನೆಆಗುತ್ತವೆ. ಸ್ವಂತಬಲದ ಮೇಲೆ ಅಥಣಿ ನೂತನ ಜಿಲ್ಲೆಗೆ ಅರ್ಹತೆ ಇದೆ. ಅಥಣಿ, ಕಾಗವಾಡ, ಮದಬಾವಿ, ಅನಂತಪುರ, ತೆಲಸಂಗ ಹಾಗೂ ರಬಕವಿ ಬನ್ನಹಟ್ಟಿ, ರಾಯಬಾಗ, ಜಮಖಂಡಿ ಸೇರಿ ಜಿಲ್ಲೆ ರಚನೆ ಮಾಡಬಹುದು. ಈ ಎಲ್ಲಾ ಪ್ರದೇಶದಗಳು ಅಥಣಿಯಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗಾಗಿ ಜನರಿಗೆ ಅಥಣಿಗೆ ಕಚೇರಿ ಕೆಲಸಕ್ಕೆ ಬಂದು ಹೋಗಲು ಅನುಕೂಲವಾಗಲಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾನ್ಯವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅಥಣಿ ಜಿಲ್ಲೆ ಮಾಡುವುದಕ್ಕೆ ಸೂಕ್ತವಾಗಿದೆ.ಇನ್ನೂ ಅಥಣಿ ಜಿಲ್ಲೆ ಮಾಡುವಂತೆ ಜಿಲ್ಲಾ ಹೋರಾಟ ಸಮಿತಿ ಮಾಡಿಕೊಂಡು ಹೋರಾಟ ನಡೆಸಲಾಗುತ್ತಿದೆ. ಅಥಣಿ ಜಿಲ್ಲೆ ಹೋರಾಟಕ್ಕೆ ಎಲ್ಲಾ ವಲಯದಿಂದಲೂ ಬೆಂಬಲವಿದೆ. ಇದು ಮುಂದೊಂದಿನ ಜನಾಂದೋಲನಕ್ಕೆ ವೇದಿಕೆ ಆಗಿಲಿದೆ. ಅಥಣಿ ಜಿಲ್ಲೆ ರಚನೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಟಳ್ಳಿ, ಸಚಿವ ಶ್ರೀಮತ ಪಾಟೀಲ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಆಗ ಮಾತ್ರ ಅಥಣಿ ಜಿಲ್ಲೆ ಕನಸು ಸಾಕಾರವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!