ಬಡವರ ಬಂಧು ಶಿವಲಿಂಗಯ್ಯಾ ಅಲ್ಲಯ್ಯನವರಮಠ

ಬೆಳಗಾವಿ: ಸಮಾಜ ಸೇವಕ, ಪ್ರಥಮ ದರ್ಜೆ ಗುತ್ತಿಗೆದಾರ ಶಿವಲಿಂಗಯ್ಯಾ ಅಲ್ಲಯ್ಯನವರಮಠ ನಿಜವಾಗಿಯೂ ಬಡವರ ಬಂಧು. ಸಮಾಜ ಸೇವೆಯನ್ನೆ ಉಸಿರಾಗಿಸಿಕೊಂಡಿರುವ ಶಿವಲಿಂಗಯ್ಯಾ ಅಲ್ಲಯ್ಯನವರಮಠ. ಸದಾ ಕಡು ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಹೀಗೆ ನಿಶ್ವಾರ್ಥ ಸಮಾಜ ಸೇವೆ ಮೂಲಕವೇ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಜನ ನಾಯಕರಾಗಿ ಹೊರಹೊಮ್ಮಿದ್ದಾರೆ.

ಹೌದು.. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಈಗ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಅವರ ಕಾರ್ಯಗಳನ್ನ ಜನರು ಮನಸ್ಸು ತುಂಬಿ ಕೊಂಡಾಡುತ್ತಿದ್ದಾರೆ.

ಸದಾ ಸಮಾಜ ಸೇವೆಗೆ ಸನ್ನದ್ದರಾಗಿರುವ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಅವರು ಲಾಕಡೌನ್ ಸಂದರ್ಭದಲ್ಲಿ ಜನರೊಂದಿಗೆ ಬೇರೆತು ಅವರ ಸಕಷ್ಟಗಳಿಗೆ ಸ್ಪಂದಿಸುವ ಕಾಯಕವನ್ನ ಮಾಡಿದ್ದಾರೆ.

ಖಾನಾಪುರದ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾವಿರಾರು ಕುಟುಂಬಗಳಿಗೆ ಶಿವಲಿಂಗಯ್ಯಾ ಅಲ್ಲಯ್ಯನವರಮಠ ನೇರವು ನೀಡಿದ್ದಾರೆ. ಕೊರೊನಾದಿಂದ ಕಷ್ಟಕ್ಕೆ ಸಿಲುಕ್ಕಿದ್ದ ತನ್ನ ಜನರು ಹಸಿವಿನಿಂದ ಬಳಲಬಾರದು.

ಯಾರೊಬ್ಬರು ಅನ್ನಕ್ಕಾಗಿ ಪರದಾಡಬಾರದೆಂದು ಸಾವಿರಕ್ಕೂ ಅಧಿಕ ಆಹಾರ ಕಿಟ್ ಗಳನ್ನ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನ ಪ್ರದರ್ಶಿಸಿದ್ದಾರೆ.
ಬಿಜೆಪಿಯ ಯುವ ಮುಖಂಡ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಸಮಾಜವೇ ಸೇವೆ ವಿಚಾರ ಬಂದಾಗ ಯಾವುದೇ ಭೇದಭಾವ ಮಾಡದೇ ಕೆಲಸವನ್ನ ಮಾಡುತ್ತಿದ್ದಾರೆ.

ಎಲೆಮರಿ ಕಾಯಿಯಂತೆ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಜನರ ಮಧ್ಯೆ ಇದ್ದುಕೊಂಡು ಕೆಲಸವನ್ನ ಮಾಡುತ್ತಿದ್ದಾರೆ. ಬರೀ ಬಡವರಿಗೆ ಸಹಾಯ ಮಾಡುವ ಕಾಯಕದಲ್ಲಿ ಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಎದುರಾಗುವ ಸಮಸ್ಯೆಗಳನ್ನ ಪರಿಹರಿಸುವ ಕಾರ್ಯವನ್ನು ಮಾಡಿದ್ದಾರೆ.

ತಮ್ಮನ್ನೆ ನಂಬಿದ ಜನರ ಒಳಿತಿಗಾಗಿ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಸರ್ಕಾರದ ಹತ್ತಾರು ಯೋಜನೆಗಳನ್ನ ರೈತರಿಗೆ, ಬಡವರಿಗೆ, ನೊಂದವರಿಗೆ ತಲುಪಿಸವ ಕೆಲಸ ಮಾಡುತ್ತಿದ್ದಾರೆ.

ಶಿವಲಿಂಗಯ್ಯಾ ಅಲ್ಲಯ್ಯನವರಮಠ ಸರಳ ವ್ಯಕ್ತಿತ್ವವೇ ಜನರ ಹತ್ತಿರವಾಗುವಂತೆ ಮಾಡಿದೆ.
ಶಿವಲಿಂಗಯ್ಯಾ ಅಲ್ಲಯ್ಯನವರಮಠ ಅವರು ಸಮಾಜ ಸೇವಕನಾಗಿ, ಬಿಜೆಪಿ ಯುವ ಮುಖಂಡನಾಗಿ ಸಂಘಟನಾ ಚತುರರಾಗಿದ್ದಾರೆ.

ಅಚ್ಚುಕಟ್ಟಾಗಿ ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸುವ ಶಿವಲಿಂಗಯ್ಯಾ ಅಲ್ಲಯ್ಯನವರಮಠ ಅವರು ಬಿಜೆಪಿ ಘಟಾನುಟಿ ನಾಯಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಿಂದುಳಿದಿರುವ ಖಾನಾಪುರ ತಾಲೂಕು ಸಮಗ್ರ ಅಭಿವೃದ್ಧಿ ಆಗಬೇಕು.

ಕಾಡಂಚಿನ ಪ್ರದೇಶದಲ್ಲಿ ಇರುವ ಹಳ್ಳಿಗಳೂ ಅಭಿವೃದ್ಧಿ ಕಾಣಬೇಕು. ಗ್ರಾಮೀಣ ಪ್ರದೇಶದ ಜನರು ಸಹ ನಗರದ ಪ್ರದೇಶದ ನಿವಾಸಿಗಳಿಂದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಪಡೆಯುವಂತಾಗಬೇಕೆಂದು ಶಿವಲಿಂಗಯ್ಯಾ ಅಲ್ಲಯ್ಯನವರಮಠ ಶ್ರಮಿಸುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿ ಇಟ್ಟುಕೊಂಡು ಶಿವಲಿಂಗಯ್ಯಾ ಅಲ್ಲಯ್ಯನವರಮಠ ಅವರಿಂದ ಇನ್ನಷ್ಟು ಜನಪರ ಕೆಲಸಗಳು ಆಗಲಿ ಎನ್ನುವುದು ಖಾನಾಪುರ ಜನತೆಯ ಆಶಯವಾಗಿದೆ.