ಸಂಪುಟ ವಿಸ್ತರಣೆಯೋ ಪುನರ್ ರಚನೆಯೋ; ಸಚಿವಾಕಾಂಕ್ಷಿಗಳಲ್ಲಿ ಢವ ಢವ

ಮಂಹಾತೇಶ ಇರಳಿ/ಶ್ರೀನಿವಾಸ ಪಟ್ಟಣ
ಬೆಂಗಳೂರು: ಉಪ ಚುನಾವಣೆ ಬಳಿಕ, ದೀಪಾವಳಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ ಮಾಡ್ತಿನಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಚಿವಾಕಾಂಕ್ಷಿಗಳಿಗೆ ಭರವಸೆ ನೀಡಿದ್ದರು. ಸಚಿವಾಕಾಂಕ್ಷಿಗಳು ಇನ್ನಷ್ಟು ದಿನಗಳ ಕಾಲ ಮಂತ್ರಿ ಆಗಲು ಕಾಯಬೇಕಾಗುತ್ತಾದೆ.
ಹೌದು..ಸಿಎಂ ಬಿಎಸವೈ ಸಚಿವ ಸಂಪುಟ ಸಭೆ ನಡೆಸಿ ದೆಹಲಿಗೆ ಹೋಗಿದ್ದರು. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿಯಾಗಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡದಿಂದ ತಕ್ಷಣಕ್ಕೆ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಗ್ನೀನ್ ಸಿಗ್ನಲ್ ಸಿಕ್ಕಿಲ್ಲ. ಆದ್ರೆ ಸಿಎಂ ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪನವರು ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಭೇಟಿ ಸಾಧ್ಯವಾಗಿಲ್ಲ. ಅದರಲ್ಲೂ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯಾವಕಾಶ ಸಿಗದ ಕಾರಣ ಹಾಗೇ ಮುಖ್ಯಮಂತ್ರಿ ಬಿಎಸವೈ ಬರಿಗೈಯಿಂದ ಮರಳಿದ್ದಾರೆ. ಆದ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಿಎಂ ಬಳಿಯಿಂದ ಸಂಪುಟ ಸೇರುವವರ ಕುರಿತ ಮಾಹಿತಿ ಪಡೆದುಕೊಂಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಬಗ್ಗೆ ತಿಳಿಸುವುದಾಗಿ ನಡ್ಡಾ ಸಿಎಂ ಬಿಎಸವೈಗೆ ಭರವಸೆ ನೀಡಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪ ಅವರಗಿಂತಲೂ ಮುಂಚೆಯೇ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ದೆಹಲಿ ತಲುಪಿದ್ದಾರೆ. ಸಚಿವ ಜಾರಕಿಹೊಳಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಜೊತೆ ಸೇರಿ ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಆದ್ರೆ ದೆಹಲಿಗೆ ಸಿಎಂ ಯಡಿಯೂರಪ್ಪನವರು ಬಂದ್ರು, ಅವರನ್ನ ಭೇಟಿ ಮಾಡದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿ ಭೇಟಿ ಬಗ್ಗೆ ಸಿಎಂ ಯಡಿಯೂರಪ್ಪ ಅವರು, ಸಂಪುಟದ ಬಗ್ಗೆ ನನ್ನ ಅಭಿಪ್ರಾಯವನ್ನ ತಿಳಿಸಿದ್ದೇನೆ. ಸಂಪುಟ ವಿಸ್ತರಣೆಯೋ ಪುನರ್ ರಚನೆಯೋ ಎಂಬುದು ಗೊತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರು ವರಿಷ್ಠರ ಜೊತೆಗೆ ಚರ್ಚಿಸಿ ಸದ್ಯದಲ್ಲೇ ಸೂಚನೆ ನೀಡುವುದಾಗಿ ಭರಸವೆ ನೀಡಿದ್ದಾರೆಂದು ಸಿಎಂ ಹೇಳಿದ್ದಾರೆ. ಇತ್ತ ಸಚಿವಾಕಾಂಕ್ಷಿಗಳು ಮಾತ್ರ ಮಂತ್ರಿ ಆಗುವ ಕನಸ್ಸು ಹೊತ್ತುಕೊಂಡು ಬೆಂಗಳೂರಿನಲ್ಲಿ ಬಿಡುಬಿಟ್ಟಿದ್ದಾರೆ. ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಕಂಡ ಬರುತ್ತಿರುವುದು ಸಚಿವಾಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ.