ರೈತರಿಗೆ ಬಂಗಾರದಂತಹ ಕಿವಿಮಾತು ಹೇಳಿದ ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ದಕ್ಷಿಣ ಭಾರತದ ರೈತರಂತೆ ನಮ್ಮ ರೈತರು ಹೈನುಗಾರಿಕೆಗೆ ಒತ್ತು ಕೊಟ್ಟರೇ ಅವರ ಬಾಳು ಬಂಗಾರವಾಗಲಿದೆ ಎಂದು ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ.
ನಗರದ ಕೆಎಂಎಫ ಆವರಣದಲ್ಲಿ ನಡೆದ 67ನೇ ಅಖಿಲ್ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳಷ್ಟು ಜನರಿಗೆ ಅಮೂಲ್ ಖಾಸಗಿ ಕಂಪನಿ ಅಂದುಕೊಂಡಿದ್ದಾರೆ. ಆದ್ರೆ ಅದು ಸಹಕಾರಿ. ದೇಶದಲ್ಲಿ ಅಮೂಲ್ ಮತ್ತು ಕೆಎಂಎಫ್ ಇವೇರಡೆ ಸಂಸ್ಥೆಗಳು ಬೆಳೆದಿವೆ. ಅಮೂಲ್ ಮತ್ತು ಕೆಎಂಎಫ್ ಮಾತ್ರ ಭಾರತ ದೇಶದಲ್ಲಿ ಗಟ್ಟಿಯಾಗಿ ನಿಂತಿವೆ. ಉಳಿದ ರಾಜ್ಯದಲ್ಲಿ ಲಾಸ್ ಆಗಿವೆ. ಮಹಾರಾಷ್ಟ್ರ, ತಮಿಳನಾಡು, ಆಂಧ್ರದಲ್ಲಿ ಲಾಸ್ ಆಗಿವೆ. ದೇವರ ಆಶಿರ್ವಾದ, ರೈತರ ಸಹಕಾರದಿಂದ ಬೆಳೆದಿವೆ. ವಿಶೇಷವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ರೈತರು ಜಾಸ್ತಿ ಕಬ್ಬು ಬೆಳೆಯುತ್ತಿವೆ. ಕಬ್ಬಿನ ಮೇಲೆ ಅವಲಂಬನೆ ಆಗಿದ್ದೇವೆ. 12 ತಿಂಗಳು ಕಬ್ಬು ಬೆಳೆ ಬೇಕು ಫ್ಯಾಕ್ಟರಿ ಅವರಿಗೆ ಕಬ್ಬು ಕಳಿಸಬೇಕು. ಕಾರ್ಖಾನೆದವರು ಯಾವಾಗ ಬಿಲ್ ಕೊಡ್ತಾರ್ ಅವರ ತಗೋಬೇಕು.
ನಾನು ಕೆಎಂಎಫ ಅಧ್ಯಕ್ಷ ಆದ ಬಳಿಕ ದಕ್ಷಿಣ ಭಾರತವನ್ನ ನೋಡಿದ್ದೇನೆ. ಅಲ್ಲಿ ಎಲ್ಲರೂ ಹೈನುಗಾರಿಕೆ ಮಾಡುತ್ತಾರೆ. ರೈತರು ವಿಶೇಷವಾಗಿ ಹೈನುಗಾರಿಕೆಯಿಂದ ಉತ್ಪನ್ನ ಬರುತ್ತದೆ. ರೈತರು ಹೈನುಗಾರಿಕೆ ಮಾಡಿದ್ರೆ ರೈತರ ಆದಾಯ ಹೆಚ್ಚಾಗುತ್ತದೆ. ಮಹಿಳೆಯರು ಹೆಚ್ಚಾಗಿ ಹೈನುಗಾರಿಕೆಯತ್ತ ಆಸಕ್ತಿ ತೋರಿಸಬೇಕು. ರೈತರು 14 ಕೆಎಂಎಫ ಒಕ್ಕೂಟದ ಮೇಲೆ ನಂಬಿಕೆ ಇಟ್ಟಿದ್ದಾರೆ. ಸರಿಯಾಗಿ ಬಿಲ್ ಕೊಡ್ತಾರೆ ಅನ್ನೋದು ಅವರಿಗೆ ಮನವರಿಕೆ ಆಗಿದೆ. ಕೆಎಂಎಫನ 14 ಒಕ್ಕೂಟದಿಂದ 1 ಸಾವಿರ ಜನರಿಗೆ ಉದ್ಯೋಗ ಕೊಡ್ತಿವಿ. ಬೆಂಗಳೂರು ಒಕ್ಕೂಟದಿಂದ 300 ಜನರನ್ನ ಕರೆದಿದ್ದಾರೆ. ಬೆಳಗಾವಿ ಒಕ್ಕೂಟದಿಂದ 300 ಜನರಿಗೆ ಮತ್ತು ಕಲಬುರ್ಗಿ ಹೀಗೆ 1 ಸಾವಿರ ಜನರಿಗೆ ನೌಕರಿ ಕೊಡುವ ಕೆಲಸವನ್ನ ಮಾಡುತ್ತೇವೆ.
ನಾನು ಕೆಎಂಎಫ ಅಧ್ಯಕ್ಷ ಆದ ಬಳಿಕ 14 ಒಕ್ಕೂಟಿನ 12 ಲಕ್ಷ ಹಸುಗಳಿಗೆ ವಿಮೆ ಮಾಡಿಸುತ್ತಿದ್ದೇವೆ. ಯಾವುದೇ ಹಸು ಸತ್ತರೇ ರೈತರಿಗೆ 40 ರಿಂದ 50 ಸಾವಿರ ವಿಮೆ ಪರಿಹಾರ ರೈತರಿಗೆ ಸಿಗಲಿದೆ. ಕೆಎಂಎಫನಿಂದ ವರ್ಷಕ್ಕೆ 15 ಸಾವಿರ ಕೋಟಿ ವಹಿವಾಟು ಮಾಡುತ್ತೇವೆ. ವಹಿವಾಟು 25 ಸಾವಿರ ಕೋಟಿಗೆ ತಲುಪಬೇಕು ಎಂಬ ಗುರಿಯನ್ನ ಇಟ್ಟುಕೊಂಡಿದ್ದೇವೆ. ಹೀಗಾಗಿ ರೈತ ಸಹಕಾರ ಹೆಚ್ಚಿನ ಪ್ರಮಾಣದಲ್ಲಿ ಕೆಎಂಎಫಗೆ ಬೇಕಾಗಿದೆ. ಆಗ ರೈತರಿಗೆ ಇನ್ನು ಹೆಚ್ಚಿನ ಅನುಕೂಲವಾಗಲಿದೆ. ಬೆಳಗಾವಿಯಲ್ಲಿ ಮೇಘಾ ಡೈರಿ ಸ್ಥಾಪಿಸಬೇಕು ಅಂದ್ರೆ 4 ರಿಂದ 5 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಬೇಕು. ಬರೀ 2 ಲಕ್ಷ ಲೀಟರ್ ನೀವು ಹಾಲು ಸಂಗ್ರಹ ಮಾಡುತ್ತಿದ್ದಿರಿ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸಬೇಕು. ನಾವೇಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಕೆಎಂಎಫ ಅನ್ನ ಬೆಳೆಸೋಣಾ ಎಂದು ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಸ.ಟಿ.ಸೋಮಶೇಖರ್, ಪ್ರಭು ಚೌವ್ಹಾಣ, ಶಶಿಕಲಾ ಜೋಲ್ಲೆ, ಸಂಸದ ಅಣ್ಣಾಸಾಹೇಬ್ ಜೋಲ್ಲೆ,ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಕೆಎಂಎಫ ನಿರ್ದೇಶಕರು, ಅಧಿಕಾರಿಗಳು ಭಾಗವಹಿಸಿದ್ದರು.