ಐಪಿಎಲ್ ಗೆ 9ನೇ ಹೊಸ ತಂಡ ಎಂಟ್ರಿ..!!

ಶ್ರೀನಿವಾಸ ಪಟ್ಟಣ
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತಿ ಮುಗಿದಿದೆ. 13 ಆವೃತ್ತಿಯಲ್ಲಿ ಐದು ಬಾರಿ ಐಪಿಎಲ್ ಟ್ರಾಫಿ ಮುಡಿಗೇರಿಸಿಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡ. 14ನೇ ಐಪಿಎಲ್ ಸೀಸನ್ ಇನ್ನಷ್ಟು ರೋಚಕತೆಯಿಂದ, ಹೊಸಬರದಿಂದ ಕೂಡಿರಲಿದೆ. ಯಾಕಂದ್ರೆ ಐಪಿಎಲ್ ಅಖಾಡಕ್ಕೆ ಮತ್ತೊಂದು ಹೊಸ ತಂಡ ಎಂಟ್ರಿ ಕೊಡಲಿದೆ.

ಯಸ್. ಈಗಾಗಲೇ ಐಪಿಎಲನಲ್ಲಿ 8 ತಂಡಗಳಿವೆ. 9ನೇ ತಂಡ ಎಂಟ್ರಿ ಕೊಡಲು ಸಿದ್ಧತೆ ನಡೆಸಿದೆ. 13ನೇ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಯುವ ಪ್ರತಿಭೆಗಳೇ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ರಸಿಕರ ಮನಸ್ಸು ಗೆದ್ದುಕೊಂಡಿದ್ದರು. ಟೀಂ ಇಂಡಿಯಾದ ಆಟಗಾರರು ಬೇರೆ ಬೇರೆ ತಂಡಗಳಲ್ಲಿ ತಮ್ಮದೇ ಆದ ಸಾಮರ್ಥ್ಯವನ್ನ ಪ್ರದರ್ಶನ ಮಾಡಿದ್ದರು. ಅದರಲ್ಲೂ ವಿದೇಶಿ ಆಟಗಾರರಾದ ಎಬಿಡಿ, ಗೆಲ್ ಸೇರಿದಂತೆ ಅನೇಕ ಆಟಗಾರರ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರು. ಅದರಲ್ಲೂ ಈ ಬಾರಿ ಕನ್ನಡದ ಆಟಗಾರರು ಎಲ್ಲಾ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಈಗ 14ನೇ ಐಪಿಎಲ್ ಭಾರತದಲ್ಲಿ ನಡೆಯಲಿದೆ. ಕೊರೊನಾ ಹಿನ್ನೆಲೆ 13ನೇ ಐಪಿಎಲ್ ಮ್ಯಾಚ್ ದುಬೈನಲ್ಲಿ ನಡೆಯಿತು.ಆದ್ರೆ ಪ್ರೇಕ್ಷಕರಿಲ್ಲದೇ ಐಪಿಎಲ್ ಕೊಂಚ ಡಲ್ ಆಗಿ ಕಾಣಿಸಿತು. ಅದೇ 14ನೇ ಐಪಿಎಲ್ ಮತ್ತೆ ಭಾರತದ ಮೈದಾನಗಳಲ್ಲಿ ನಡೆಯಿದೆ.

ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ 2021ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಮುಂದಿನ ಮಾರ್ಚ ಅಥಾವ ಏಪ್ರೀಲನಲ್ಲಿ ನಡೆಯಿದೆ. ಆಗ ಐಪಿಎಲನ 9ನೇ ತಂಡವಾಗಿ ಗುಜರಾತಿನ ತಂಡ ಎಂಟ್ರಿ ಪಡೆದುಕೊಳ್ಳಲಿದೆ. ಗುಜರಾತಿನ ಉದ್ಯಮಿಗಳು, ಸೆಲಿಬ್ರಿಟಿಗಳು ಸೇರಿ ಈ ತಂಡವನ್ನ ಖರೀದಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 9ನೇ ತಂಡವಾಗಿ ಗುಜರಾತ ಎಂಟ್ರಿ ಕೊಟ್ಟರೇ ಆಗ ಮತ್ತಷ್ಟು ಹೊಸ ಆಟಗಾರರು, ಹೊಸ ನಾಯಕನನ್ನ ನಾವು ನೋಡಲು ಸಾಧ್ಯವಾಗಲಿದೆ.