ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆದ್ರೆ ನಾನು ಮಂತ್ರಿ ಆಗೇ ಆಗ್ತಿನಿ..!!

ಮಹಾಂತೇಶ ಇರಳಿ
ಬೆಳಗಾವಿ: ರಾಜ್ಯದಲ್ಲಿ ಸಿಎಂ ಬಿಎಸವೈ ಹುದ್ದೆ ಖಾಲಿ ಇಲ್ಲ. ಅವರೇ ಮುಂದಿನ ಮೂರು ವರ್ಷ ಸಿಎಂ. ನಾನು ಮಂತ್ರಿ ಆಗ್ತಿನಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಉಮೇಶ ಕತ್ತಿ, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆದ್ರೆ ನಾನು ಮಂತ್ರಿ ಆಗೇ ಆಗ್ತಿನಿ. ಮುಖ್ಯಮಂತ್ರಿಗಳು, ಹೈಕಮಾಂಡ್ ನನ್ನ ಬಗ್ಗೆ ಚಿಂತನೆ ಮಾಡುತ್ತಿದೆ
ಸುರೇಶ ಅಂಗಡಿ ನಿಧನದಿಂದ ತೆರವಾದ ಲೋಕಸಭಾ ಕ್ಷೇತ್ರಕ್ಕೆ ಅವರ ಪತ್ನಿ ಅಥವಾ ಮಗಳಿಗೆ ಟಿಕೆಟ್ ನೀಡಿದರೆ ಜವಾಬ್ದಾರಿ ಸ್ಥಾನದಲ್ಲಿ ನಿಂತು ಕೆಲಸ ಮಾಡುತ್ತೇವೆ. ಅಂಗಡಿ ಕುಟುಂಬ ಬೇರೆಯವರಿಗೆ ನೀಡ್ತಾರೆ ಅಂದ್ರೆ ನನ್ನ ತಮ್ಮನಿಗೆ ಟಿಕೆಟ್ ಕೊಡಿ ಅಂತಿನಿ. ರಮೇಶ ಕತ್ತಿ ಕೂಡಾ ಲೋಕಸಭೆ ಉಪಚುನಾವಣೆ ಸ್ಪರ್ಧೆಗೆ ಉತ್ಸುಕನಾಗಿದ್ದಾನೆ. ಅದರ ಬಗ್ಗೆ ಮುಖ್ಯಮಂತ್ರಿಗಳು, ಹೈಕಮಾಂಡ್ ನಿರ್ಣಯ ತೆಗೆದು ಕೊಳ್ಳಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಾದರೆ ಬಿಜೆಪಿ ಪಕ್ಷ ಮಾಡುತ್ತೆ ಸಿದ್ದರಾಮಯ್ಯ ಹೇಗೆ ಮಾಡ್ತಾರೆ ? ಸಿದ್ದರಾಮಯ್ಯಗೆ ಏನು ವಿಷಯ ಇಲ್ಲಾ ಅಂತಾ ಈ ರೀತಿ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಹೇಳಿಕೆ ನೀಡಬಾರದು. ಇನ್ನು ಮೂರು ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲಾ ಎಂದು ಉಮೇಶ ಕತ್ತಿ