ಕರ್ನಾಟಕ
ನಮ್ಮಣ್ಣ ಡೈಮಂಡ್ ಮಂತ್ರಿ ಆಗ್ತಾನೆ:ರಮೇಶ ಕತ್ತಿ

ಮಹಾಂತೇಶ ಇರಳಿ
ಬೆಳಗಾವಿ: ನಮ್ಮಣ್ಣ ಉಮೇಶ ಕತ್ತಿ ಡೈಮಂಡ್ ಅವನು ಮಂತ್ರಿ ಆಗಿಯೇ ಆಗ್ತಾನೆ ಎಂದು ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ನಮ್ಮಣ್ಣ ಉಮೇಶ ಕತ್ತಿ ಡೈಮಂಡ್.
ಒಂದಲ್ಲ ಒಂದು ದಿನ ಅದರ ಬೆಳಕು ಪ್ರಜ್ವಲಿಸಲಿದೆ. ಎಷ್ಟೇ ಆದ್ರು ಡೈಮಂಡ್ ಡೈಮಂಡ್.
ಹಿರಿಯ ಶಾಸಕ ಉಮೇಶ ಕತ್ತಿ.
ಇವತ್ತಿಲ್ಲ ನಾಳೆ ನಮ್ಮಣ್ಣನಿಗೆ ಸಂಘ, ಪಕ್ಷ ಒಳ್ಳೆಯ ಸ್ಥಾನ ಕೊಡಲಿದೆ. 17 ಜನರಿಂದ ನಮ್ಮ ಸರ್ಕಾರ ಬಂದಿದೆ. ಅವರು ಪಾರ್ಟಿ ಗೆ ಬಂದ ಬಳಿಕ ತ್ಯಾಗ ಮಾಡಬೇಕಾದ ಸನ್ನಿವೇಶ ಬಂದಿದೆ. ಈಗಾಗಲೇ ಪಕ್ಷ ನಮಗೆ ಸಾಕಷ್ಟು ಗುರುತಿಸಿ ಸ್ಥಾನ ಮಾನ ನೀಡಿದೆ. ಮತ್ತೆ ನಮ್ಮಣ್ಣನಿಗೆ ಮಂತ್ರಿ ಸ್ಥಾನ ಸಿಗುತ್ತೆ ಅನ್ನುವ ಭರವಸೆ ಇದೆ ಎಂದು ರಮೇಶ ಕತ್ತಿ ಹೇಳಿದ್ದಾರೆ.