ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ರಾಜಾಹುಲಿ; ಎಂಇಎಸಗೆ ಶಾಶ್ವತ ಮಣ್ಣು ಕೊಟ್ಟ ಸಿಎಂ ಯಡಿಯೂರಪ್ಪ

ಶ್ರೀನಿವಾಸ ಪಟ್ಟಣ
ಬೆಂಗಳೂರು:ಪದೇ ಪದೇ ಗಡಿ ಖ್ಯಾತೆ, ಭಾಷಾ ತಂಟೆ ತೆಗೆಯುತ್ತಿದ್ದ ನಾಡ ವಿರೋಧಿ ಎಂಇಎಸ ಅನ್ನ ಶಾಶ್ವತವಾಗಿ ಮಣ್ಣು ಕೊಡುವ ಕಾರ್ಯವನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ಕರ್ನಾಟಕ ಸರ್ಕಾರವೂ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನ ಸ್ಥಾಪಿಸುವುದು ಮತ್ತು ಈ ಪ್ರಾಧಿಕಾರಕ್ಕೆ 50 ಕೋಟಿ ರುಪಾಯಿ ಮೀಸಲಿಡುವಂತೆ ಆದೇಶಿಸಿದ್ದಾರೆ.
ಈ ಮೂಲಕ ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅದರಲ್ಲೂ ಈ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಗೆ ಸರ್ಕಾರ ಗಟ್ಟಿಯಾದ ನಿರ್ಧಾರವನ್ನ ತೆಗೆದುಕೊಂಡಿದೆ.
ಹಾಗೇ ನೋಡಿದ್ರೆ ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಗೆ ಈ ಮರಾಠ ಅಭಿವೃದ್ಧಿ ಪ್ರಾಧಿಕಾರವೂ ಬೋಸ್ ಆಗಲಿದ್ದು, ಇದರಿಂದ ರಾಜ್ಯದಲ್ಲಿರುವ ಮರಾಠ ಸಮುದಾಯದ ಹಿತವನ್ನ ಸರ್ಕಾರ ಕಾಪಾಡುವ ಕೆಲಸವನ್ನ ಮಾಡುತ್ತಿದೆ ಎನ್ನುವ ಸಂದೇಶವನ್ನ ಯಡಿಯೂರಪ್ಪನವರು ರವಾನಿಸಿದ್ದಾರೆ.
ಆದ್ರೆ ಸಿಎಂ ಯಡಿಯೂರಪ್ಪನವರ ಈ ರಾಜಕೀಯ ಇಚ್ಛಾಶಕ್ತಿ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಗಡಿ ಪ್ರದೇಶದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನ ಶಾಶ್ವತವಾಗಿ ಮಣ್ಣು ಕೊಡುವ ಕಾರ್ಯವನ್ನ ಮಾಡಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬಾಲ್ಕಿ ಸೇರಿ 814 ಕನ್ನಡ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ವಿಷ ಬೀಜ ಬಿತ್ತುತ್ತಿರುವ ನಾಡ ವಿರೋಧಿಗಳ ಅಂಗಡಿಯನ್ನ ಸಿಎಂ ಯಡಿಯೂರಪ್ಪ ಶಾಶ್ವತವಾಗಿ ಬಂದ್ ಮಾಡಿದ್ದಾರೆ.