ಕರ್ನಾಟಕ

ಅಥಣಿ ಪವರ್ ಸೆಂಟರ್‌: ಅಧ್ಯಕ್ಷ , ಉಪಾಧ್ಯಕ್ಷ ಅವಿರೋಧ ಆಯ್ಕೆ

ಶ್ರೀನಿವಾಸ ಪಟ್ಟಣ/ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿದೆ. ಮತ್ತೆ ಮಾಜಿ ಸಂಸದ ರಮೇಶ್ ಕತ್ತಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಪವರ್ ಸೆಂಟರ್ ಅಥಣಿಯ ಆರ.ಎಸ.ಎಸ ಪ್ರಮುಖ ಅರವಿಂದ ದೇಶಪಾಂಡೆ ಅವರ ಮನೆ ಅಂಗಳವಾಗಿದ್ದು ಇತಿಹಾಸವಾಗಿದೆ.



ಕಳೆದ ಎರಡು ವಾರಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗಾಗಿ ತೀವ್ರ ಕಸರತ್ತು ನಡೆಸಿದ್ದರು ತ್ರೀಮೂರ್ತಿ ಬಣಗಳು. ಇಂದು ಬೆಳಗ್ಗೆ ಮತ್ತೆ ಬೆಳಗಾವಿ ಸರ್ಕ್ಯೂಟ್ ಹೌಸನಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ ಅಧ್ಯಕ್ಷ ಬಾಲಚಂದ್ರ, ಮಾಜಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ, ಸಂಸದರಾದ ಈರಣ್ಣ ಕಡಾಡಿ, ಅಣ್ಣಾಸಾಹೇಬ್ ಜೋಲ್ಲೆ, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಅರವಿಂದ ಪಾಟೀಲ್ ಸೇರಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಭಾಗವಹಿಸಿದ್ದರು. ಸುಧೀರ್ಘ ಸಭೆ ಬಳಿಕ ಒಮ್ಮತದ ಅಭ್ಯರ್ಥಿಗಳ ಹೆಸರನ್ನ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸುವ ಮೂಲಕ ಘೋಷಣೆ ಮಾಡಿದ್ರು.

ಇನ್ನೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರ ಅವಿರೋಧ ಆಯ್ಕೆ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಲ್ಲಿ
ಅಥಣಿ ಪವರ್ ಸೆಂಟರ್ ಆಗಿ ರೂಪವಾಗಿದ್ದದ್ದು ವಿಶೇಷ. ಡಿಸಿಸಿ ಬ್ಯಾಂಕ್ ಚುನಾವಣೆ ಆರಂಭದಿಂದ ಕೊನೆ ಕ್ಷಣದ ವರೆಗೂ ಅಥಣಿ ಆರ.ಎಸ.ಎಸ ಪ್ರಮುಖ ಅರವಿಂದರಾವ್ ದೇಶಪಾಂಡೆ ಅವರೊಂದಿಗೆ ಸಮಾಲೋಚನೆ ನಡೆಸಿ, ಅರವಿಂದರಾವ್ ದೇಶಪಾಂಡೆ ಅವರ ಸೂಚನೆಯಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಮತ್ತು ಅಧ್ಯಕ್ಷರ ಅವಿರೋಧ ಆಯ್ಕೆ ಮಾಡಲಾಗಿದೆ. ಬಿಜೆಪಿ ಪಾಳ್ಯದಲ್ಲಿ ಇರುವ ಕತ್ತಿ ಸಾಹುಕಾರರು, ಜಾರಕಿಹೊಳಿ ಸಾಹುಕಾರರು ಮತ್ತು ಸವದಿ ಸಾಹುಕಾರರ ಬಣಗಳು ಆರ.ಎಸ.ಎಸ ಪ್ರಮುಖ ಅರವಿಂದರಾವ್ ದೇಶಪಾಂಡೆ ಆಜ್ಞೆಯನ್ನ ಚಾಚು ತಪ್ಪದಂತೆ ಪಾಲಿಸಿ ಸೈ ಎನಿಸಿಕೊಂಡಿದ್ದಾರೆ. ತಕ್ಷಣಕ್ಕೆ ಡಿಸಿಸಿ ಬ್ಯಾಂಕ್ ಕುಸ್ತಿ ಸುಖಾಂತ್ಯವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ ಢವಳೇಶ್ವರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಣದಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇನ್ನೂ ಸಂಜೆ ಅಧಿಕೃತ ಘೋಷಣೆ ಆಗಲಿದೆ. ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ವಿಚಾರದಲ್ಲಿ ಮತ್ತೊಂದು ಸುತ್ತಿನ ಕುಸ್ತಿ ನಡೆದ್ರು ಯಾರು ಅಚ್ಚರಿ ಪಡಬೇಕಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!