ಟಾಪ್ ಸ್ಟೋರಿ

ರವಿ ಬೆಳಗೆರೆ ಭೀಮಾ ತೀರದ ಹಂತಕರು..!!!

ಮಹಾಂತೇಶ ಇರಳಿ/ಶ್ರೀನಿವಾಸ ಪಟ್ಟಣ
ಬೆಂಗಳೂರು: ಭಾರತ ಪತ್ರಿಕೋಧ್ಯಮದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನರಾಗಿದ್ದಾರೆ. ಈ ಮೂಲಕ ಕನ್ನಡಿಗರು ಓದಿ ಬೆಳೆಸಿದ್ದ ಹಾಯ್ ಬೆಂಗಳೂರು ಅನಾಥವಾಗಿದೆ. ರವಿ ಬೆಳಗೆರೆ ಬರೆದ ಭೀಮಾ ತೀರದ ಹಂತಕರು ಪುಸಕ್ತವೂ ಬಿಸಿಲು ನಾಡಿನ ರಕ್ತಚರಿತ್ರೆ ಕರಾಳತೆಯನ್ನ ಅನಾವರಣಗೊಳಿಸಿತ್ತು.
ಯಸ್.. ಇಂದು ಬೆಳಗಿನ ಜಾವ ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

. ಪತ್ರಕರ್ತ ರವಿ ಬೆಳಗೆರೆ(62) ವಯಸ್ಸಾಗಿತ್ತು. ಎದೆನೋವಿನಿಂದ ತೀವ್ರ ಹೃದಯಾಘಾತಕ್ಕೆ ರವಿ ಬೆಳಗೆರೆ ಒಳಗಾಗಿದ್ದಾರೆ.

ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದ ಕಾರಣ ರವಿ ಆಸ್ಪತ್ರೆಯಲ್ಲಿ ನಮ್ಮನ್ನು ಅಗಲಿದ್ದಾರೆ. ಕನ್ನಡ ಪತ್ರಿಕೋಧ್ಯಮದಲ್ಲಿ ರವಿ ಬೆಳಗೆರೆ ಅಂದ್ರೆ ಆನೆ ನಡೆದಿದ್ದೇ ಹಾದಿ ಎಂಬಂತೆ ಅಕ್ಷರಕ್ರಾಂತಿಯನ್ನೆ ಮಾಡಿದ್ದಾರೆ.

ಅದರಲ್ಲೂ ರವಿ ಬೆಳಗೆರೆ ಆರಂಭದಲ್ಲಿ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅವುಗಳಿಗೆ ಹೊಸ ಸ್ವರೂಪ ನೀಡುವ ಕೆಲಸವನ್ನ ಮಾಡಿದ್ದರು. ಅನಂತರ ರವಿ ಬೆಳಗೆರೆ ಪತ್ರಿಕೋಧ್ಯಮದಲ್ಲಿ ಹಿಂದೆ ತಿರುಗಿ ನೋಡಲೇ ಇಲ್ಲ. 1995ರಲ್ಲಿ ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್‌ ಪತ್ರಿಕೆಯನ್ನ ಕರ್ನಾಟಕಕ್ಕೆ ಸಮರ್ಪಿಸಿದ್ರು. ನೋಡ ನೋಡುತ್ತಲೇ ಹಾಯ್ ಬೆಂಗಳೂರು ಎಂಬ ಕಪ್ಪು ಸುಂದರಿ ಕನ್ನಡಿಗರ ಮನೆ ಮಾತು ಆಯ್ತು. ಹಾಯ್ ಬೆಂಗಳೂರು ಮೂಲಕ ಹೊಸ ಓದುಗರನ್ನ ಸೃಷ್ಟಿಸಿಕೊಂಡರು ರವಿ.

ಇನ್ನು ಬೆಳಗೆರೆಯವರು ಅನುವಾದ, ಕಥಾಸಂಕಲನ, ಅಂಕಣ ಬರಹಗಳು, ಜೀವನ ಕಥೆ ಸೇರಿ ಹೀಗೆ 70ಕ್ಕೂ ಅಧಿಕ ಪುಸ್ತಕಗಳನ್ನ ಹೊರ ತಂದಿದ್ದಾರೆ. ರವಿ ಬೆಳೆಗೆರೆ ಅವರ ಸೂರ್ಯ ಶಿಕಾರಿ ಅಂಕಣ, ಖಾಸ್ ಬಾತ್, ಬಾಟಮ್ ಐಟಮ್ ಜನಮನ ಗೆದ್ದಿದ್ದವು. ಭೀಮಾ ತೀರದ ಹಂತಕರು, ಡಿ ಕಂಪನಿ, ಹಿಮಾಗ್ನಿ, ದಂಗೆಯ ದಿನಗಳು ಹೀಗೆ ಅನೇಕ ಪುಸ್ತಕಗಳು ಹೊರ ತಂದಿದ್ದಾರೆ.

ಬೆಳಗೆರೆ ಪುಸ್ತಕಗಳು ಅಂದ್ರೆ ಎಲ್ಲರನ್ನ ತಮ್ಮತ್ತ ಸೆಳೆಯುವ ಶಕ್ತಿ ಅವರಲ್ಲಿತ್ತು. ರವಿ ಬೆಳಗೆರೆ ಬರೀ ಹಾಯ್ ಬೆಂಗಳೂರ್ ವಾರಪತ್ರಿಕೆ, ಓ ಮನಸೇ ಪಾಕ್ಷಿಕ ಪತ್ರಿಕೆಗೆ ಅಷ್ಟೇ ಸಿಮಿತವಾಗಿರಲಿಲ್ಲ. ಕನ್ನಡ ಚಿತ್ರರಂಗ, ಸಾಹಿತಿ, ಚಿತ್ರಕಥೆ ಬರಹಗಾರ, ಟಿವಿ ವಾಹಿನಿಯಲ್ಲಿ ಜನಪ್ರೀಯ ಕಾರ್ಯಕ್ರಮಗಳನ್ನ ನೀಡುವ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದರು. ಅದರಲ್ಲೂ ರವಿ ಬೆಳಗೆರೆ ಭಾವನಾ ಪ್ರಕಾಶನ ಮತ್ತು ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು ಆಗಿದ್ದಾರೆ. ಕನ್ನಡಿಗರ ಮನಸ್ಸು ಗೆದ್ದ ಕಪ್ಪು ಸುಂದರಿಯ ಸರದಾರ ರವಿ ಬೆಳಗೆರೆಯನ್ನ ಎಲ್ಲರೂ ಮಿಸ್ ಮಾಡಿಕೊಳ್ಳುವಂತಾಗಿದೆ.

ರವಿ ಬೆಳಗೆರೆ ದೈಹಿಕವಾಗಿ ನಮ್ಮನ್ನು ಅಗಲಿದರು ಅವರ ಅಕ್ಷರ ಸ್ವರೂಪದಲ್ಲಿ ನಮ್ಮ ಮಧ್ಯೆ ಇದ್ದು ನಮಗೆ ಮಾರ್ಗದರ್ಶನವನ್ನ ನಿರಂತರವಾಗಿ ಮಾಡಲಿದ್ದಾರೆ ಎಂಬುದು ರವಿ ಅಭಿಮಾನಿಗಳ ಮನದಾಳ ಮಾತುಗಳು. ರವಿ ಅಗಲಿಕೆಗೆ ಗಣ್ಯಾತಿಗಣ್ಯರಿಂದ ಕಂಬನಿ ಮಿಡದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹ ರವಿ ಅಗಲಿಕೆಗೆ ಶೋಕ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!