ಡಿಸಿಸಿ ಬ್ಯಾಂಕ್ ಕುಸ್ತಿ ಬಾಲಚಂದ್ರ ಜಾರಕಿಹೊಳಿ ಕಿಂಗ್ ಮೇಕರ್

ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಕುಸ್ತಿ ಮತ್ತಷ್ಟು ಕಗ್ಗಂಟಾಗಿದೆ. ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಆಯ್ಕೆ ಆಗಿದೆ. ಈಗೇನಿದ್ದರೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಈಗಾಗಲೇ ನವೆಂಬರ 14ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅವಿರೋಧ ಆಯ್ಕೆ ಆಗುತ್ತಾ ಇಲ್ಲವಾ ಅನ್ನೋ ಅನುಮಾನಗಳು ಕಾಡುತ್ತಿವೆ.
ಯಸ್.. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವೇಲ್ಲರೂ ಒಂದಾಗಿದ್ದೇವೆ ಎಂದು ತ್ರಿಮೂರ್ತಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ಆದ್ರು. 16 ಸ್ಥಾನಗಳಲ್ಲಿ ಬರೀ 13 ಸ್ಥಾನಗಳು ಮಾತ್ರ ಅವಿರೋಧ ಆಯ್ಕೆ ಆದ್ರೆ. ಉಳಿದ 3 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಆಂತರಿಕವಾಗಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲ್ಲಿಸಲು ಕರಸತ್ತು ನಡೆಸಿದರು. ಹಾಗೇ ನೋಡಿದ್ರೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯೇ ಕಿಂಗ್ ಮೇಕರ್. ಬಾಲಚಂದ್ರ ಜಾರಕಿಹೊಳಿ ಯಾರಿಗೆ ಸೂಚಿಸುತ್ತಾರೋ ಅವರೇ ಅಧ್ಯಕ್ಷ, ಉಪಾಧ್ಯಕ್ಷ ಆಗ್ತಾರೆ. ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಮಂತ್ರಿ ಉಮೇಶ ಕತ್ತಿ ಒಂದಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದ್ರು ಆಂತರಿಕವಾಗಿ ಈ ನಾಯಕರ ಪ್ರತಿಷ್ಠೆಯ ಚದುರಂಗದ ಆಟಗಳು ಒಳ ಒಳಗೆ ನಡೆಯುತ್ತಿದೆ.
ಹಾಗೇ ನೋಡಿದ್ರೆ ಎಲ್ಲಾ 16 ಸ್ಥಾನಗಳೂ ಅವಿರೋಧ ಆಯ್ಕೆ ನಡೆದಿದ್ದರೇ ರಮೇಶ ಕತ್ತಿ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗುತ್ತಿದ್ದರು. ಆದ್ರೆ ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ರಮೇಶ ಕತ್ತಿ, ಅಣ್ಣಾಸಾಹೇಬ್ ಜೋಲ್ಲೆ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಹೆಸರು ಕೇಳಿ ಬರುತ್ತಿದೆ. ಅತ್ತ ಉಪಾಧ್ಯಕ್ಷ ಸ್ಥಾನದಲ್ಲೂ ರಾಜೇಂದ್ರ ಅಂಕಲಗಿ,ಮಹಾಂತೇಶ ದೊಡ್ಡಗೌಡರ ಹೀಗೆ ಇನ್ನೆ ಕೆಲವರು ತಮ್ಮ ಬಯಕೆಯನ್ನ ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ.
ಇನ್ನು ಡಿಸಿಸಿ ಬ್ಯಾಂಕಿನ 16 ಸ್ಥಾನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಬಳಿ ಹೆಚ್ಚಿನ ಸಂಖ್ಯಾ ಬಲವಿದೆ. ಉಮೇಶ ಕತ್ತಿ ಮತ್ತು ಲಕ್ಷ್ಮಣ ಸವದಿ ಬಣಗಳು ಸಹ ತಮ್ಮೆಯಾದ ಸಂಖ್ಯಾ ಬಲವನ್ನ ಹೊಂದಿವೆ. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಅವಿರೋಧ ಮಾಡುವ ಬಗ್ಗೆ ಮೂರು ಬಣದ ಮಧ್ಯೆ ಒಮ್ಮತದ ತೀರ್ಮಾನ ಬಂದ್ರೆ ಮಾತ್ರ ಸಾಧ್ಯವಾಗಲಿದೆ. ಇಲ್ಲವಾದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಈಗ ಬಾಲಚಂದ್ರ ಜಾರಕಿಹೊಳಿ ಮತ್ತು ಕತ್ತಿ ಬ್ರದರ್ಸ್ ಒಂದಾಗಿಯೇ ಇದ್ದಾರೆ. ಬಾಲಚಂದ್ರ ಜಾರಕಿಹೊಳಿ ಯಾರನ್ನ ಸೂಚಿಸುತ್ತಾರೋ ಅವರೇ ಡಿಸಿಸಿ ಬ್ಯಾಂಕನ ಅಧ್ಯಕ್ಷ, ಉಪಾಧ್ಯಕ್ಷರಾಗ್ತಾರೆ ಅಂತಾ ಮೂಲಗಳು ಹೇಳುತ್ತಿವೆ. ಎಲ್ಲದಕ್ಕೂ ನವೆಂಬರ 16ರಂದು ಸ್ಪಷ್ಟವಾದ ಚಿತ್ರಣ ಸಿಗಲಿದೆ.