ಬಿಜಗುಪ್ಪಿಯಲ್ಲಿ ಕೈ ಮುರಿದ್ರಾ.. ಕೈ ಕತ್ತರಿಸಿದ್ರಾ..!?

ಬೆಳಗಾವಿ: ಬಿಜಗುಪ್ಪಿ ಗ್ರಾಮದಲ್ಲಿ ಬಸವಣ್ಣನವರ ಮೂರ್ತಿ ಕೈಯನ್ನ ಯಾರೋ ಕೀಡಿಗೇಡಿಗಳು ಕತ್ತಿರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತ ಪೊಲೀಸರು ಹೇಳುವ ಪ್ರಕಾರ ಎರಡು ದಿನಗಳ ಹಿಂದೆಯೇ ಕೈ ಮುರುದಿದೆ ಹೇಗೆ ಮುರಿದಿದೆ ಅನ್ನೋದು ಅನ್ನೋದನ್ನ ತನಿಖೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಎಂದಿನಂತೆ ಗ್ರಾಮಸ್ಥರು ಬಸವಣ್ಣನವರ ಮೂರ್ತಿ ನೋಡಿದಾಗ ಬಸವಣ್ಣನವರ ಮೂರ್ತಿ ಕೈಯನ್ನ ಕತ್ತಿರಿಸಿದ್ದು ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಒಂದು ವರ್ಷ ಹಿಂದೆ ಗ್ರಾಮದ ಸರ್ಕಲನಲ್ಲಿ ಬಸವಣ್ಣನವರ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದರು.

ನಿನ್ನೆ ತಡರಾತ್ರಿ ಯಾರೋ ಕೀಡಿಗೇಡಿಗಳು ಗ್ರಾಮದಲ್ಲಿನ ಶಾಂಕಿ ಕದಡಬೇಕೆಂಬ ಉದ್ದೇಶದಿಂದ ಬಸವಣ್ಣನವರ ಮೂರ್ತಿಯನ್ನ ಭಗ್ನಗೊಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಬಿಜಗತ್ತಿ ಗ್ರಾಮದಲ್ಲಿ ಈಗ ಬೆಂಕಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ. ರಾಮದುರ್ಗ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.